ಅಬಾಕಸ್: ರಾಷ್ಟ್ರೀಯ ಚಾಂಪಿಯನ್ ಆದ ಪೌರಕಾರ್ಮಿಕರ ಮಗ: ಸಾಧನೆಗೈದ ಸರ್ಕಾರಿ ಶಾಲಾ ಬಾಲಕ ವಸಂತ್

ದೊಡ್ಡಬಳ್ಳಾಪುರ: ತಮಿಳುನಾಡಿನ ಚೆನ್ನೈ ನಗರದ ಟ್ರೇಡ್ ಸೆಂಟರ್ ನಲ್ಲಿ ನಡೆದ 42ನೇ ರಾಷ್ಟ್ರೀಯ ಹಂತದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿ ವಸಂತ್.ಎಸ್ ಚಾಂಪಿಯನ್ ಆಗಿದ್ದು, ವಿದ್ಯಾರ್ಥಿಯ ಸಾಧನೆಗೆ ಮೆಚ್ಚಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಅವರು ಶಾಲೆಗೆ ಬಂದು ವಿದ್ಯಾರ್ಥಿ ವಸಂತ್‌ಗೆ ಶುಭಾಶಯ ಕೋರಿ, ಶಾಲೂ ಹೊದಿಸಿ ಅಭಿನಂದನೆ ಸಲ್ಲಿಸಿದರು. ನಗರಸಭೆಯಲ್ಲಿ ಪೌರಕಾರ್ಮಿರಾಗಿ ಕೆಲಸ ಮಾಡುತ್ತಿರುವ ಸುಬ್ಬು ಮತ್ತು ಮಂಜಮ್ಮ ಅವರ ಪುತ್ರ ವಸಂತ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸೆಪ್ಟೆಂಬರ್ 10 ರಂದು ಚೆನೈ ನಗರದಲ್ಲಿ ಆಯೋಜಿಸಲಾಗಿದ್ದ 42ನೇ ರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಸಂತ್.ಎಸ್ ಅಬಾಕಸ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾನೆ. ವಿವಿಧ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ B4 ಚಾಂಪಿಯನ್ ಸ್ಥಾನ ಪಡೆದ ವಸಂತ್ ವಿದ್ಯೆ…