ರಕ್ತದೊತ್ತಡ..? ದಾಸವಾಳ ಹೂವಿನಲ್ಲಿ ಅಡಗಿದೆ ಮದ್ದು

ದಾಸವಾಳ ಹೂವು ತನ್ನ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಅನೇಕರಿಗೆ ಈ ಹೂವಿನ ಔಷಧೀಯ ಗುಣಗಳು ಅರಿವಿಲ್ಲದೇ ಇರಬಹುದು. ದಾಸವಾಳ ಹೂವು ಅತ್ಯಂತ ಆರೋಗ್ಯದಾಯಕ ಗುಣಗಳನ್ನು ಹೊಂದಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ರಕ್ಷಣೆ ನೀಡುವ ಆಹಾರವಾಗಿ ಪ್ರಶಂಸಿಸಲ್ಪಡುತ್ತಿದೆ. ದಾಸವಾಳದ ಚಹಾವನ್ನು ಕುಡಿಯುವುದರಿಂದ ಸಿಸ್ಟೋಲಿಕ್​ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬ ಅಧ್ಯಯನವು ಸಾರ್ವಜನಿಕರ ಗಮನವನ್ನು ಸೆಳೆಯುತ್ತದೆ. ಅದಲ್ಲದೆ, ಡಯಾಸ್ಟೋಲಿಕ್​ ರಕ್ತದೊತ್ತಡವನ್ನೂ ದಾಸವಾಳ ಚಹಾವು ಕಡಿಮೆ ಮಾಡಬಹುದು ಎಂಬ ಸೂಚನೆಯೂ ಇದೆ. ದಾಸವಾಳ ಚಹಾ ಸೇವಿಸುವುದು ಕೊಲೆಸ್ಟ್ರಾಲ್​ ಮಟ್ಟವನ್ನು ಶೇ.22 ರಷ್ಟು ಕಡಿಮೆ ಮಾಡಬಹುದು ಮತ್ತು ಕೆಟ್ಟ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸಬಹುದು ಎಂಬುದು ವೈದ್ಯರ ಸೂಚನೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಅಪಾಯ ಕಡಿಮೆಯಾಗುವುದು. ದಾಸವಾಳ ಹೂವು ರೋಗಗಳ ಜೀವಕೋಶಗಳನ್ನು ನಾಶಪಡಿಸಲು ಸಹಾಯ ಮಾಡಬಲ್ಲದು ಮತ್ತು ಇತ್ತೀಚಿನ ದಿನಗಳಲ್ಲಿ ಹೃದಯ ಸಮಸ್ಯೆಗಳು ಹೆಚ್ಚಿದ್ದರೂ, ದಾಸವಾಳ ಹೂವನ್ನು ಸೇವಿಸಿ ಉತ್ತಮ…