ವಯನಾಡ್: ಮುಂಗಾರು ಮಳೆ ಆರ್ಭಟದ ನಡುವೆ, ಭೀಕರ ಭೂಕುಸಿತಕ್ಕೆ ನಲುಗಿರುವ ಕೇರಳದ ವಯನಾಡಿನಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರ ಸಜ್ಜಿನಂತೆ ಸಾಗಿದೆ. ಈ ಕಾರ್ಯಾಚರಣೆಯ ನಡುವೆ ಬೆಂಗಳೂರಿನ ಎಂಇಜಿ ಗ್ರೂಪ್ನ ಯೋಧರು ಈ ಸಾಧನೆ ಇಡೀ ದೇಶದ ಗಮನಸೆಳೆದಿದೆ. Indian army engineers in action fabricating the Bailey Bridge at Wayanad. Constructed in record time pic.twitter.com/9POfAvrdAF — Maj Gen Harsha Kakar (@kakar_harsha) August 2, 2024 ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರ್ಘಟನೆಗಳಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು ಅನೇಕರು ಜೀವಂತ ಸಮಾಧಿಯಾಗಿರುವ ಆತಂಕವಿದೆ. ಅವರಿಗಾಗಿ ಸೇನೆ ಹಾಗೂ ಎನ್ಡಿಆರ್ಎಫ್ ತಂಡಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದೇ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ದುರ್ಗಮ ಸ್ಥಳದಲ್ಲಿ ಬೆಂಗಳೂರಿನ ಎಂಇಜಿ ಗ್ರೂಪ್ನ ಯೋಧರು ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಜನರ…