ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ದಂಪತಿಗಳನ್ನು ದೂರಮಾಡಿ ಅಸ್ತಿ ಕಬಳಿಸಲು ಸಚಿವ ಭೈರತಿ ಸುರೇಶ್ ಅಪ್ತರೆಂದು ಹೇಳಿಕೊಂಡು ಯುವಕರ ಗುಂಪು ದಾಂಧಲೆ ನಡೆಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ರೌಡಿಗಳ ಅಟ್ಟಹಾಸಕ್ಕೆ ಪೊಲೀಸರೂ ಸಾಥ್ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸೋಮವಾರ ದೂರು ಸಲ್ಲಿಕೆಯಾಗಿದೆ. ದಂಪತಿಗಳ ನಡುವಿನ ವಿರಸದ ಪ್ರಕರಣದ ಲಾಭ ಪಡೆಯಲು ರೌಡಿ ಗುಂಪು ಹೆಣ್ಣೂರು ಬಳಿ ನಿವೇಶನವೊಂದಕ್ಕೆ ಏಕಾಏಕಿ ನುಗ್ಗಿ ಪುಂಡಾಟ ಪ್ರದರ್ಶಿಸಿದೆ. ಹೆಣ್ಣೂರು ಗೋಪಿ ಮತ್ತು ಇಪ್ಪತ್ತು ಅಪರಿಚಿತ ವ್ಯಕ್ತಿಗಳ ದಾಂಧಲೆಯನ್ನು ಪ್ರತಿಭಟಿಸಿದ ಜಮೀನು ಮಾಲೀಕ ಶಾಜಿ ಜೋಸೆಫ್ ಅವರ ಕೊಲೆಗೆ ಯತ್ನ ನಡೆದಿದೆ. ಅಷ್ಟೇ ಅಲ್ಲ, ಮಾರಣಾಂತಿಕ ದಾಳಿ ನಡೆಸುವ ರಾಟ್‌ವೀಲರ್ ನಾಯಿಯನ್ನೂ ಕರೆತಂದು ದಾಳಿಗೆ ಯತ್ನಿಸಿದ್ದಾರೆಂದೂ ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.…
Tag: ಭೈರತಿ ಸುರೇಶ್
ಸಿದ್ದು ಬಂಟನ ವಿರುದ್ದ ತೊಡೆತಟ್ಟಿದ ಶೋಭಾ; ಭ್ರಷ್ಟಾಚಾರದ ದಾಖಲೆ ಬಿಡುಗಡೆಗೆ ಭೈರತಿಗೆ ಸವಾಲು
ಬೆಳಗಾವಿ: ರಾಜ್ಯದ ಸಚಿವ ಭೈರತಿ ಸುರೇಶ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ನಡುವಿನ ವಾಕ್ಸಮರ ಮುಂದುವರಿದಿದೆ. ಭೈರತಿ ಸುರೇಶ್ ವಿರುದ್ದ ವಾಗ್ದಾಳಿ ನಡೆಸಿರುವ ಶೋಭಾ ಕರಂದ್ಲಾಜೆ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಸಚಿವ ಭೈರತಿ ಸುರೇಶ್ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಮುಡಾ ಹಗರಣದ ಮಹತ್ವದ ದಾಖಲೆಗಳನ್ನು ಭೈರತಿ ಸುರೇಶ ಸುಟ್ಟಿರುವದು ನಿಜ ಎಂದು ಪುನರುಚ್ಛರಿಸಿದ ಶೋಭಾ ಕರಂದ್ಲಾಜೆ, ಈ ಹಗರಣ ಬಗ್ಗೆ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ನಾನು ಸಚಿವ ಸುರೇಶ ವಿರುದ್ಧ ಖಚಿತವಾಗಿ ಆರೋಪ ಮಾಡಿದ ಮೇಲೆ ನನ್ನ ವಿರುದ್ಧ ಭ್ರಷ್ಟಾಚಾರದ ಮಾತು ಆಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.