ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾರ ಚೊಚ್ಚಲ ಸಿನಿಮಾ ‘ಫೈರ್‌ ಫ್ಲೈ’ ಹಾಡಿಗೆ ಸಿನಿರಸಿಕರು ಫಿದಾ

ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಅವರ ಚೊಚ್ಚಲ ನಿರ್ಮಾಣದ ‘ಫೈರ್‌ ಫ್ಲೈ’ ಸಿನಿಲೋಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದೆ. ಶ್ರೀ ಮುತ್ತು ಸಿನಿ ಸರ್ವೀಸಸ್ ಬ್ಯಾನರ್ ಅಡಿಯಲ್ಲಿ ನಿವೇದಿತಾ ಶಿವರಾಜ್‌ಕುಮಾರ್ ಅವರು ‘ಫೈರ್‌ ಫ್ಲೈ’ ಚಿತ್ರವನ್ನು ನಿರ್ಮಿಸಿದ್ದಾರೆ. ಏಪ್ರಿಲ್ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಈ ಚಿತ್ರದ ಮೊದಲ ಹಾಡನ್ನು ಆನಂದ್ ಆಡಿಯೋ ಮ್ಯೂಸಿಕ್ ಲೇಬಲ್ ಮೂಲಕ ಬಿಡುಗಡೆ ಮಾಡಲಾಗಿದೆ. ‘ಇನ್ ದಿ ನೈಟ್’ ಎಂಬ ಶೀರ್ಷಿಕೆಯಲ್ಲಿ ಈ ಹಾಡು ಸಿನಿರಸಿಕರ ಮೆಚ್ಚುಗೆ ಗಳಿಸಿದೆ. ಪಿಲ್ ಕಪಿಲನ್ ಹಾಡಿರುವ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ವಂಶಿ ನಿರ್ದೇಶನದ ‘ಫೈರ್‌ಫ್ಲೈ’ ಚಿತ್ರದಲ್ಲಿ ನಾಯಕರಾಗಿ ವಂಶಿ ಅವರೇ ನಟಿಸಿದ್ದು, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಅಚ್ಯುತ್ ಕುಮಾರ್ ಮೊದಾಲದವರು ಪತ್ರಗಳನ್ನು ಹಂಚಿಕೊಂಡಿದ್ದಾರೆ.