ಬೆಂಗಳೂರು: ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC) ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸುಧಾರಿತ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸುವ ಮೂಲಕ ಕೌಶಲ್ಯ ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆ ಇಡುತ್ತಿದೆ. GTTC ಕ್ಯಾಂಪಸ್‌ನಲ್ಲಿ NIELIT ವಿಸ್ತರಣಾ ಕೇಂದ್ರವನ್ನು ಸ್ಥಾಪಿಸಲು ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ನೊಂದಿಗೆ ತಿಳಿವಳಿಕಾ ಒಪ್ಪಂದಕ್ಕೆ (MoU) ಬುಧವಾರ ಸಹಿ ಹಾಕಲಾಯಿತು. ಈ ಸಹಯೋಗವು ವಿದ್ಯಾರ್ಥಿಗಳಿಗೆ – ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಅಂಚಿನಲ್ಲಿರುವ ಸಮುದಾಯಗಳವರಿಗೆ – ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT), ಡೇಟಾ ವಿಶ್ಲೇಷಣೆ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಅತ್ಯಾಧುನಿಕ ತರಬೇತಿ ಒದಗಿಸಲು ನೆರವಾಗಲಿದೆ. ವಿಕಾಸ ಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ GTTC ವ್ಯವಸ್ಥಾಪಕ ನಿರ್ದೇಶಕ ವೈ.ಕೆ. ದಿನೇಶ್ ಕುಮಾರ್ ಮತ್ತು NIELIT…