ಬೆಂಗಳೂರು: ವಿನಯ್ ಸೋಮಯ್ಯ ಸಾವಿನ ಪ್ರಕರಣ ಕುರಿತಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ್ ಆರೋಪಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು. ತನ್ನೇರಾ ಮೈನಾ ಅವರು ಮಡಿಕೇರಿ ಸರ್ಕಲ್ ಠಾಣೆಯಲ್ಲಿ ಮಾರ್ಚ್ 5 ರಂದು ಕೊಡಗಿನ ಸಮಸ್ಯೆಗಳು ಹಾಗೂ ಸೂಚನೆಗಳು ಎನ್ನುವ ವಾಟ್ಸಪ್ ಗುಂಪಿನಲ್ಲಿ ಬರುವ ಸಂದೇಶವನ್ನು ಗಮನಿಸಿದ ತನ್ನೇರಾ ಮೈನಾ ಅವರು ರಾಜೇಂದ್ರ, ವಿಷ್ಣು ನಾಚಪ್ಪ, ವಿನಯ್ ಸೋಮಯ್ಯ ಅವರ ವಿರುದ್ದ ದೂರು ಸಲ್ಲಿಸುತ್ತಾರೆ. ವಿನಯ್ ಸೋಮಯ್ಯ ಅವರ ಕೊನೆಯ ವಾಟ್ಸಪ್ ಸಂದೇಶದ ಕೊನೆಯ ಪ್ಯಾರದಲ್ಲಿ ‘ನನ್ನ ವಿರುದ್ದ ಎಫ್ ಐಆರ್ ದಾಖಲಾದಾಗ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜೆ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಪಿ ಚರಣ್, ವಕೀಲ ರಾಕೇಶ್ ದೇವಯ್ಯ, ನಿಶಾಂತ್,ಮೋಹನ್ ಅವರಿಗೆ ಧನ್ಯವಾದಗಳು…