‘ಶಕ್ತಿ’ ನಂತರ ಇದೀಗ ಟೂರ್ ಪ್ಯಾಕೇಜ್.. KSRTCಯಿಂದ ಪ್ರವಾಸಿ ಪರ್ವ

ಬೆಂಗಳೂರು: ಈವರೆಗೂ ‘ಶಕ್ತಿ’ ಮೂಲಕ ಗಮನಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇದೀಗ ತನ್ನ ಪ್ರಯಾಣಿಕರಿಗೆ ಮತ್ತೊಂದು ಯೋಜನೆಯನ್ನು ಪ್ರಕಟಿಸಿದೆ. ಬೆಂಗಳೂರು ಟು ಜೋಗಾ, ಬೆಂಗಳೂರು ಟು ಸೋಮನಾಥಪುರ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್ ಆರಂಭಿಸಲಾಗಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ “ಬೆಂಗಳೂರು-ಸೋಮನಾಥಪುರ-ತಲಕಾಡು–ಭರಚುಕ್ಕಿ-ಗಗನಚುಕ್ಕಿ” ಮಾರ್ಗದಲ್ಲಿ ವಾರಾಂತ್ಯದ ದಿನಗಳಲ್ಲಿ (ಶನಿವಾರ & ಭಾನುವಾರ) ಪ್ಯಾಕೇಜ್ ಟೂರನ್ನು ರೂಪಿಸಿದೆ. 12/08/2023 ರಿಂದ ಈ ಪ್ಯಾಕೇಜ್ ಟೂರ್ ಆರಂಭವಾಗಲಿದ್ದು (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ಸಾಧಾರಣ ದರವನ್ನು ನಿಗದಿಪಡಿಸಲಾಗಿದೆ. ಟಿಕೆಟ್ ದರ ಹೀಗಿದೆ: ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಟೂರ್ ಪ್ಯಾಕೇಜ್ ಗೆ ವಯಸ್ಕರಿಗೆ 450 ರೂಪಾಯಿ. 6 ರಿಂದ…