‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ” ಯಾತ್ರೆ ಮತ್ತಷ್ಟು ಅರ್ಥಪೂರ್ಣ.. ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಜೊತೆ ಇದೀಗ ‘ಗಯಾ ದರ್ಶನ ಭಾಗ್ಯ’

ಬೆಂಗಳೂರು: ಆಸ್ತಿಕರ ಪಾಲಿಗೆ ರಾಜ್ಯ ಸರ್ಕಾರ ‘ತೀರ್ಥಯಾತ್ರೆ ಭಾಗ್ಯ’ ಕರುಣಿಸುವ ಮೂಲಕ ಮತ್ತೊಂದು ಮಜಲಿಗೆ ಹೆಜ್ಜೆ ಇಟ್ಟಿದೆ. ಈಗಾಗಲೇ ಜಾರಿಯಲ್ಲಿರುವ ‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ” ರೈಲು ಯಾತ್ರೆಯ ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳ ಪ್ಯಾಕೇಜ್ ಯಾತ್ರೆಯಲ್ಲಿ ಈ ಬಾರಿ ಬಿಹಾರದ ಗಯಾ ಕ್ಷೇತ್ರದ ದರ್ಶನ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಸರ್ಕಾರ 8 ದಿನಗಳ ಯಾತ್ರೆಯನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್ ಗೆ ಈ ಹಿಂದೆ ನಿಗದಿ ಮಾಡಲಾಗಿದ್ದ ಸರ್ಕಾರದಿಂದ ನೀಡಲಾಗುವ 5000 ರೂಪಾಯಿಗಳ ಸಹಾಯಧನ ಮೊತ್ತವನ್ನು 7500 ರೂಪಾಯಿಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ LHB ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ…