ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಸಂಕೀರ್ಣ ತೆರಿಗೆ ಸ್ಲ್ಯಾಬ್‌ಗಳನ್ನು ಸರಳಗೊಳಿಸಿ ಈಗ ಕೇವಲ 5% ಮತ್ತು 18% ಎಂಬ ಎರಡು ಸ್ಲ್ಯಾಬ್‌ಗಳನ್ನು ಮಾತ್ರ ಜಾರಿಗೆ ತಂದಿದೆ. ಸರ್ಕಾರದ ಈ ಕ್ರಮವು ದೇಶದ ಅಭಿವೃದ್ಧಿಗೆ ಬರೆದ ಮುನ್ನುಡಿಯಾಗಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ವ್ಯಾಪಾರಿಗಳಿಗೆ ಸೌಲಭ್ಯ, ಗ್ರಾಹಕರಿಗೆ ರಿಯಾಯಿತಿ, ಕೈಗಾರಿಕೆಗಳಿಗೆ ಉತ್ಸಾಹ ನೀಡುವುದು ಈ ನಿರ್ಧಾರದ ಉದ್ದೇಶ ಇದರಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಗತಿಯ ಶಕೆ ಆರಂಭವಾದಂತಾಗಿದೆ. ವ್ಯಾಪಾರ ವಲಯದಲ್ಲಂತೂ ಸಂತಸ ಮನೆಮಾಡಿದೆ. ಕರ್ನಾಟಕ: ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಹೊಸ ಚೈತನ್ಯ ಕರ್ನಾಟಕದ ಮೈಸೂರು ರೇಷ್ಮೆ, ಚನ್ನಪಟ್ಟಣ ಆಟಿಕೆಗಳು, ಧಾರವಾಡ ಪೇಡಾ, ಮೈಸೂರು ಪಾಕ್ ಮೊದಲಾದ ಉತ್ಪನ್ನಗಳು ಈಗ ಕಡಿಮೆ ತೆರಿಗೆ ದರಕ್ಕೆ ಒಳಪಟ್ಟಿವೆ. ಇದರಿಂದ ಸಾಂಪ್ರದಾಯಿಕ ಉದ್ಯಮಗಳು ಸ್ಪರ್ಧಾತ್ಮಕ ಬೆಲೆಗೆ ಉತ್ಪಾದನೆ ಮಾಡಬಹುದಾಗಿದೆ. ನಂಜನಗೂಡು…
