ಜೈಪುರ: ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್, ಮತ್ತೊಂದು ಅಭಿಯಾನಕ್ಕೆ ತಯಾರಿ ನಡೆಸಿದೆ. ಏಪ್ರಿಲ್ 28 ರಂದು ಜೈಪುರದಲ್ಲಿ ‘ಸಂವಿಧಾನ ಉಳಿಸಿ’ ಅಭಿಯಾನದ ಭಾಗವಾಗಿ ಬೃಹತ್ ರಾಜ್ಯ ಮಟ್ಟದ ರ್ಯಾಲಿ ಆರಂಭವಾಗಲಿದೆ. ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋತಾಸ್ರಾ ಅವರು, ಮುಂಬರುವ ವಾರಗಳಲ್ಲಿ ಈ ಅಭಿಯಾನ ರಾಜ್ಯ ಮಟ್ಟದಿಂದ ಬೂತ್ ಮಟ್ಟದವರೆಗೆ ನಡೆಯಲಿದೆ ಎಂದು ಹೇಳಿದರು. ಜೈಪುರದಲ್ಲಿ ನಡೆಯುವ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಹಿರಿಯ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಸುಮಾರು 2,200 ವಿಭಾಗೀಯ ಅಧ್ಯಕ್ಷರ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ವ್ಯವಸ್ಥೆಗಳನ್ನು ಸುಗಮಗೊಳಿಸಲು ಏಪ್ರಿಲ್ 24 ರಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪೂರ್ವಸಿದ್ಧತಾ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ದೋತಾಸ್ರಾ ಹೇಳಿದರು. ‘ಸಂವಿಧಾನ ಉಳಿಸಿ’ ಅಭಿಯಾನವು ಕೇಂದ್ರ ಸರ್ಕಾರವು…