ಜನಪ್ರತಿನಿಧಿಗಳಿಗೆ ಜನಸಾಮಾನ್ಯರ ಬಗ್ಗೆ ಇಚ್ಚಾಶಕ್ತಿ ಇದ್ದರೆ ಅಭಿವೃದ್ಧಿಶೀಲ ಕ್ಷೇತ್ರ ನಿರ್ಮಾಣ ಅಸಾಧ್ಯವಲ್ಲ ಎಂಬುದಕ್ಕೆ ಈ ಸರ್ಕಾರಿ ಶಾಲೆಗಳು ಉದಾಹರಣೆಯಂತಿದೆ. ಖಾಸಗಿ ಹೈಟೆಕ್ ಶಾಲೆಗಳನ್ನು ನಾಚಿಸುವಂತಿರುವ BTM ಲೇಔಟ್‌ನ ಸರ್ಕಾರಿ ಶಾಲೆಗಳು.. ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್ ಅವರ ಮನದಾಳದ ಮಾತು ಹೀಗಿದೆ… ರಾಜಧಾನಿ ಬೆಂಗಳೂರು ಸೆರಗಿನಲ್ಲಿರುವ BTM ಲೇಔಟ್’ನಲ್ಲಿರುವ ಸರ್ಕಾರಿ ಶಾಲೆಗಳು ಖಾಸಗಿ ಕಾರ್ಪೊರೇಟ್ ಹೈಟೆಕ್ ಶಾಲೆಗಳನ್ನು ನಾಚಿಸುವ ರೀತಿಯಲ್ಲಿ ಅಭಿವೃದ್ಧಿ ಕಂಡಿವೆ. ಪದಪುಂಜಗಳ ಆಕರ್ಷಣೆಗೆ ಸಾಕ್ಷಿಯಾಗುವ ‘ಶಿಕ್ಷಣ ಕಾಶಿ’ ಎಂದರೇನು? ಅದು ಎಲ್ಲಿದೆ ಎಂದು ಹೂಡುತ್ತಾ ಸಾಗಿದವರಿಗೆ ಈ ಶಾಲೆಗಳು ಸಿಗುತ್ತವೆ. ಇವು ‘ಕಾಶಿಗಿಂತಲೂ’ ಮೇಲ್ಪಂಕ್ತಿಯಲ್ಲಿದೆ ಎಂದು ಗೊತ್ತಾಗುತ್ತದೆ. ತಾವರೆಕೆರೆ, ಕುವೆಂಪುನಗರ ಸುತ್ತಮುತ್ತಲ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರೆ ಸಾಕು, ಹೊಸ ಪ್ರಪಂಚ ತೆರೆದುಕೊಂಡಂತೆ ಭಾಸವಾಗುತ್ತದೆ. ಆಕರ್ಷಕ ಕಟ್ಟಡ.. ಅದರೊಳಗೆ ವ್ಯವಸ್ಥಿತ ತರಗತಿಗಳು. ಶಿಸ್ತುಬದ್ಧ ವಿದ್ಯಾರ್ಥಿ ಸಮೂಹಕ್ಕೆ ಎಲ್ಲಿಲ್ಲದ ಪಾಠ-ಪ್ರವಚನ. ಯಾವುದೇ…