ವಾರಣಾಸಿ; ಕಾಶಿಗೆ ಇನ್ನು ಕನ್ನಡಿಗರ ಯಾತ್ರೆ ಮತ್ತಷ್ಟು ಸುಗಮ; ಕರ್ನಾಟಕ ಭವನ ಛತ್ರ 5 ಕೋ.ರೂ.ವೆಚ್ಚದಲ್ಲಿ ನವೀಕರಣ; ವ್ಯವಸ್ಥೆ ಪರಿಶೀಲಿಸಿದ ಸಚಿವ ರಾಮಲಿಂಗ ರೆಡ್ಡಿ

ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶ ರಾಜ್ಯದ ವಾರಣಾಸಿಯ ಹನುಮಾನ್ ಘಾಟ್‌ನಲ್ಲಿ ಕರ್ನಾಟಕದ ಆಸ್ತಿಕರಿಗೆ ಸಕಲ ಸೌಲಭ್ಯ ಕಲ್ಪಿಸುವತ್ತ ರಾಜ್ಯದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಕ್ರಮ ಕೈಗೊಂಡಿದ್ದಾರೆ. ಇಂದು ಅವರು ವಾರಣಾಸಿಗೆ ನೀಡದ ಭೇಟಿ ಗಮನಸೆಳೆಯಿತು. ವಾರಣಾಸಿಯ ಹನುಮಾನ್ ಘಾಟ್‌ನಲ್ಲಿ ಕರ್ನಾಟಕ ಭವನ ಛತ್ರಕ್ಕೆ ಇಂದು ಸಾರಿಗೆ ಮತ್ತು ಮಂಜುರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಕರ್ನಾಟಕ ಭವನ ಛತ್ರ 1927 ನಿರ್ಮಿಸಿದ್ದು, ಇದೇ ವೇಳೆ ಕರ್ನಾಟಕ ಭವನದ ಛತ್ರ, ಕೊಠಡಿಗಳನ್ನು ಅಭಿವೃದ್ಧಿ ಪಡಿಸಲು ನಿಶ್ಚಯಿಸಿದ್ದು, ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗಿ ಎಲ್ಲ ಸುಸಜ್ಜಿತವಾಗಿ ಅಭಿವೃದ್ಧಿಯಾಗಲಿದೆ, ಎಂದು ಸಚಿವರು ಮಾಹಿತಿ ನೀಡಿದರು. ಕಾಶಿಯ ಕರ್ನಾಟಕ ಭವನ ಛತ್ರ: ಕಾಶಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕರ್ನಾಟಕ ಭವನ‌ ನವೀಕರಣ ಕಾರ್ಯ- ಸಾರಿಗೆ-ಮುಜರಾಯಿ ಸಚಿವ ರಾಮಲಿಂಗಾ…