ಹುಬ್ಬಳ್ಳಿ: ಕೆಪಿಎಸ್ಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. 27-08-2024ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು 18-09-2024ರಂದು ನಡೆಸಲಾಗುವುದು ಎಂದು ಕಾನೂನು ವಿವಿ ಪ್ರಕಟಣೆ ತಿಳಿಸಿದೆ. ಗೆಜೆಟೆಡ್ ಪ್ರೊಬೇಸನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆಯ ದಿನದಂದು ರಾಜ್ಯದಲ್ಲಿ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಸಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾನೂನು ವಿವಿ ಪರೀಕ್ಷಾ ವೇಳಾಪಟ್ಟಿಯಲ್ಲಿ 27.08.2024ರಂದು ನಿಗದಿ ಪಡಿಸಿದ ಎಲ್ಲ ಪರೀಕ್ಷೆಗಳನ್ನು 18.09.2024ರಂದು ನಡೆಸಲು ತಿರ್ಮಾನಿಸಲಾಗಿದೆ. ಪರೀಕ್ಷೆಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ, ಎಂಬ ಮಾಹಿತಿಯನ್ನು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮತ್ತು ಸಂಬಂಧಪಟ್ಟ ಸಿಬ್ಬಂದಿ ಗಮನಕ್ಕೆ ತರಲು ಸೂಚಿಸಲಾಗಿದೆ ಎಂದು KSLU ತಿಳಿಸಿದೆ.
Tag: Karnataka Law University Exam Date
ಕಾವೇರಿ ಹೋರಾಟ; ಬಂದ್ ಹಿನ್ನೆಲೆ ಕಾನೂನು ಕಾಲೇಜ್ಗಳ ಪರೀಕ್ಷೆ ಮುಂದೂಡಿಕೆ
ಬೆಂಗಳೂರು: ಕಾವೇರಿ ಹೋರಾಟ ಹಾಗೂ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಾಳೆ (ಮಂಗಳವಾರ) ನಡೆಯಬೇಕಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (Karnataka State Law University) (KSLU’s LAW SCHOOL) ಕುಲಪತಿ ಪ್ರೊ.ಡಿ.ಸಿ. ಬಸವರಾಜು ಅವರು, ಬಂದ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆಗಬಹುದಾದ ಅನಾನುಕೂಲತೆಗಳನ್ನು ಮನಗಂಡು ಸೆಪ್ಟೆಂಬರ್ 26ರ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಕಾನೂನು ವಿಶ್ವವಿದ್ಯಾಲಯ ನಡೆಸುತ್ತಿರುವ, ಮಂಗಳವಾರ ನಡೆಯಬೇಕಿರುವ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಅವರು, ಮಂಗಳವಾರದ ಪರೀಕ್ಷೆಯನ್ನು ಅಕ್ಟೋಬರ್ 8ಕ್ಜೆ ನಿಗದಿಪಡಿಸಲಾಗಿದೆ ಎಂದಿದ್ದಾರೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡಿರುವ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಜಲಸಂರಕ್ಷಣಾ ಸಮಿತಿಯು ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಿವೆ. ಈ ಬಂದ್ಗೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ಘೋಷಿಸಿವೆ. ಈ…