ಬೆಂಗಳೂರು: ರಾಜ್ಯ ಸರ್ಕಾರದ ಮ್ಹವಾಕಾಂಕ್ಷಿ ‘ಗ್ಯಾರೆಂಟಿ’ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ’ಯ ಶತಕೋಟಿ ಸಂಭ್ರಮ ಸಮಾರಂಭ ಗಮನಸೆಳೆಯಿತು. ‘ಶಕ್ತಿ’ ಯೋಜನೆಯ ಪರಿಪೂರ್ಣ ಜಾರಿಯ ಜೊತೆಯಲ್ಲೇ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ KSRTC ಚಾಲಕರನ್ನು ಅಭಿನಂಧಿಸಿ ಗೌರವಿಸಿದ ಸನ್ನಿವೇಶವೂ ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು. ರಾಜ್ಯದ ಆಡಳಿತದ ‘ಶಕ್ತಿ’ಕೇಂದ್ರ ವಿಧಾನಸೌಧದಲ್ಲಿ ಶುಕ್ರವಾರ ‘ಶಕ್ತಿ’ ಗ್ಯಾರೆಂಟಿಯ ಶತಮಾನ ಸಂಭ್ರಮ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿತ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಗಳ (KSRTC ಸಮೂಹ) ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಏನಿದು ಚಿನ್ನದ ಪದಕದ ಪುರಸ್ಕಾರ? ಗ್ರಾಮಾಂತರ ಸಾರಿಗೆಗಳಲ್ಲಿ 15 ವರ್ಷಗಳ ಅಪಘಾತ…
Tag: KSRTC Airavata
ದಸರಾ ಅವಧಿಯಲ್ಲಷ್ಟೇ ವಿಶೇಷ ಬಸ್ ಟಿಕೆಟ್ ದರ ಹೆಚ್ಚಳ; ಸೀಮಿತ ಅವಧಿ ನಂತರ ಯಥಾಸ್ಥಿತಿ.. ಟಿಕೆಟ್ ದರ ವ್ಯತ್ಯಾಸದ ಟ್ವೀಟಾಸ್ತ್ರಕ್ಕೆ KSRTC ಸ್ಪಷ್ಟನೆ
ರಾಜಧಾನಿ-ಸಾಂಸ್ಜೃತಿಕ ನಗರಿ ನಡುವೆ ದಸರಾ ಸಂದರ್ಭ ಸೀಮಿತ ಅವಧಿಗಷ್ಟೇ KSRTC ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ನಿಗಮ ಸ್ಪಷ್ಟಪಡಿಸಿದೆ. ಬೆಂಗಳೂರು: KSRTC ದರ ಹೆಚ್ಚಳ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿರುವ ಚರ್ಚೆ ಹಿನ್ನೆಲೆಯಲ್ಲಿ ವಿದ್ಯಮಾನಗಳ ಕುರಿತಂತೆ ಸ್ಪಷ್ಟನೆ ನೀಡಿರುವ ನಿಗಮ, ವಿಶೇಷ ಸಂದರ್ಭಗಳಲ್ಲಿ ವಿಶೇಷ ಸೌಲಭ್ಯಕ್ಕನುಗುಣವಾಗಿ ಕೈಗೊಳ್ಳುವ ನಿರ್ಧಾರ ದಸರಾ ವಿಶೇಷ ಸಂದರ್ಭದಲ್ಲಿ ಅನ್ವಯವಾಗಿದೆ. ಇದು ಸೀಮಿತ ಅವಧಿಯ ಕ್ರಮವಾಗಿದೆ ಎಂದು ಹೇಳಿದೆ. ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕಳೆದ 4 ದಶಕಗಳಿಂದಲೂ ಪ್ರತಿ ವರುಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ , ಮೈಸೂರು-ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್ಸುಗಳಿಗೆ ನಿಯಮಾವಳಿಗಳನ್ವಯ ಶೇ.20 ಪ್ರಯಾಣ ದರ ಹೆಚ್ಚಿಸಿಗುತ್ತಿದೆ. ಸದರಿ ಪ್ರಯಾಣ ದರವು ಸೀಮಿತ ಅವಧಿ ಮುಗಿದ…