ದಸರಾ ಅವಧಿಯಲ್ಲಷ್ಟೇ ವಿಶೇಷ ಬಸ್ ಟಿಕೆಟ್ ದರ ಹೆಚ್ಚಳ; ಸೀಮಿತ ಅವಧಿ ನಂತರ ಯಥಾಸ್ಥಿತಿ.. ಟಿಕೆಟ್ ದರ ವ್ಯತ್ಯಾಸದ ಟ್ವೀಟಾಸ್ತ್ರಕ್ಕೆ KSRTC ಸ್ಪಷ್ಟನೆ

ರಾಜಧಾನಿ-ಸಾಂಸ್ಜೃತಿಕ ನಗರಿ ನಡುವೆ ದಸರಾ ಸಂದರ್ಭ ಸೀಮಿತ ಅವಧಿಗಷ್ಟೇ KSRTC ಪ್ರಯಾಣ ದರ ಏರಿಕೆ ಮಾಡಲಾಗಿದೆ ಎಂದು ನಿಗಮ ಸ್ಪಷ್ಟಪಡಿಸಿದೆ‌.  ಬೆಂಗಳೂರು: KSRTC ದರ ಹೆಚ್ಚಳ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿರುವ ಚರ್ಚೆ ಹಿನ್ನೆಲೆಯಲ್ಲಿ ವಿದ್ಯಮಾನಗಳ ಕುರಿತಂತೆ ಸ್ಪಷ್ಟನೆ ನೀಡಿರುವ ನಿಗಮ, ವಿಶೇಷ ಸಂದರ್ಭಗಳಲ್ಲಿ ವಿಶೇಷ ಸೌಲಭ್ಯಕ್ಕನುಗುಣವಾಗಿ ಕೈಗೊಳ್ಳುವ ನಿರ್ಧಾರ ದಸರಾ ವಿಶೇಷ ಸಂದರ್ಭದಲ್ಲಿ ಅನ್ವಯವಾಗಿದೆ. ಇದು ಸೀಮಿತ ಅವಧಿಯ ಕ್ರಮವಾಗಿದೆ ಎಂದು ಹೇಳಿದೆ.‌ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಕಳೆದ 4 ದಶಕಗಳಿಂದಲೂ ಪ್ರತಿ ವರುಷ ದಸರಾ ನಿಮಿತ್ತ 10 ದಿನಗಳ ಅಥವಾ ಸೀಮಿತ ಅವಧಿಗೆ ಅನ್ವಯವಾಗುವಂತೆ , ಮೈಸೂರು-ಬೆಂಗಳೂರು ನಡುವೆ ಕಾರ್ಯಾಚರಣೆಯಾಗುವ ದಸರಾ ವಿಶೇಷ ತಡೆರಹಿತ ಬಸ್ಸುಗಳಿಗೆ ನಿಯಮಾವಳಿಗಳನ್ವಯ ಶೇ.20 ಪ್ರಯಾಣ ದರ ಹೆಚ್ಚಿಸಿಗುತ್ತಿದೆ. ಸದರಿ ಪ್ರಯಾಣ ದರವು ಸೀಮಿತ ಅವಧಿ ಮುಗಿದ…

KSRTCಗೆ ‘ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ’ ಪ್ರಶಸ್ತಿ

ಮುಂಬೈ: ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ ರಾಜ್ಯ ಸಾರಿಗೆ ಸಂಸ್ಥೆ (KSRTCಸಿ) ಗೆ ಸಾಲು ಪ್ರಶಸ್ತಿಗಳು ಸಿಗುತ್ತಿವೆ. ಇದೀಗ ಕಾಮಕಾಜಿ ಬಿ2ಬಿ ಮೀಡಿಯಾ ವತಿಯಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ಪ್ರಶಸ್ತಿಯೂ ಲಭಿಸಿದೆ. ಕಾಮಕಾಜಿ ಬಿ 2 ಬಿ ಮೀಡಿಯಾ ನೀಡುವ 15 ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಡಿ ‘ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ’ ವರ್ಗಗಳಲ್ಲಿ ಕೆಎಸ್ಸಾರ್ಟಿಸಿಗೆ ಎರಡು ಪ್ರಶಸ್ತಿಗಳು ಸಿಕ್ಕಿದೆ. ಮುಂಬಯಿಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ ನಲ್ಲಿ ಗುರುವಾರ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಬ್ಲೂ ಯಾಂಡರ್ ವ್ಯವಸ್ಥಾಪಕ ನಿರ್ದೇಶಕರು ವಿನೋಕ್‌, ಬ್ಲೂ ಯಾಂಡರ್ ಉಪಾಧ್ಯಕ್ಷ ಉಮೇಶ್ ಗೌರ್, ಬ್ಲೂ ಯಾಂಡರ್ ನಿರ್ದೇಶಕ ಅನುರಾಧ ಅವರು 15ನೇ ಆವೃತ್ತಿಯ ಎಕ್ಸ್ಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ಶಿಪ್ ವರ್ಗದಡಿ ‘ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ…