ಸೆಪ್ಟೆಂಬರ್‌ನಿಂದ ರಾಜ್ಯದಲ್ಲಿ ‘KSRTC ಲಾರಿ’ಗಳ ಕಾರುಬಾರು..!

ಬೆಂಗಳೂರು: ಜನಹಿತ ಸಾರಿಗೆ ಸೇವೆ ಮೂಲಕ ದೇಶದಲ್ಲೇ ಖ್ಯಾತ ಸಂಸ್ಥೆ ಎನಿಸಿರುವ KSRTC ಇದೀಗ ತನ್ನ ಸೇವೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ. ಈ ವರೆಗೂ ಪ್ರಯಾಣಿಕರ ಸೇವೆ ಒದಗಿಸುತ್ತಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ KSRTC ಇನ್ನು ಮುಂದೆ ಕಾರ್ಗೋ ಸೇವೆಯನ್ನು ಒದಗಿಸಲಿದೆ. ಕೆಎಸ್ಸಾರ್ಟಿಸಿ ನೌಕರರ ಪಾಳಯದಲ್ಲೂ ಸಂತಸ: ‘ಶಕ್ತಿ’ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದೀಗ ಮತ್ತೊಂದು ಯೋಜನೆ ಮೂಲಕ ನಿಗಮಕ್ಕೆ ಮತ್ತಷ್ಟು ಬಲ ಸಿಗುವ ವಿಶ್ವಾಸ ನಿಗಮದ ನೌಕರರದ್ದು. ಲಾರಿಗಳನ್ನು ಹೊಂದುವ ಮೂಲಕ ಸರಕು ಸಾಗಣೆ ಸೇವೆ ಒದಗಿಸಿ ಆ ಮೂಲಕ ನಿಗಮದ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಯತ್ನ ಸರ್ಕಾರದ ವತಿಯಿಂದ ನಡೆದಿದೆ. ಪ್ರಸಕ್ತ ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದಿರುವ ಈ ಕಸರತ್ತು ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ, ಕಾರ್ಗೋ ಸೇವೆ…