‘ಒಂದು ನಿಗಮ ಹತ್ತಾರು ಕಾರ್ಯ..’ KSRTC ಪಾಲಿಗೆ ಸಂಭ್ರಮ.. ನಿಗಮದ ನೌಕರ ವೃಂದಕ್ಕೆ ಬಂಪರ್..

ಬೆಂಗಳೂರು: ರಾಜ್ಯದ ಜನರ ಹೆಮ್ಮೆಯ ರಥ KSRTC ತನ್ನ ಪ್ರಯಾಣಿಕರ ಸೇವೆ ಸುಗಮವಾಗಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ–2ರ ಆವರಣದಲ್ಲಿ ಮಂಗಳವಾರ ’62ನೇ ಸಂಸ್ಥಾಪನಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ‌ ಸಚಿವ ರಾಮಲಿಂಗ ರೆಡ್ಡಿ ಅವರು ವಿವಿಧ ಕಾರ್ಯಾಚರಣೆಗಳಿಗೆ ಮುನ್ನುಡಿ ಬರೆದರು. ಏನಿದು ವಿಶೇಷತೆ ? ಮೈಸೂರು ರಾಜ್ಯ ಸರ್ಕಾರವು 1948 ರಲ್ಲಿ ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ (ಎಂ.ಜಿ.ಆರ್.ಟಿ.ಡಿ) ಅನ್ನು 100 ವಾಹನಗಳೊಂದಿಗೆ ಪ್ರಾರಂಭಿಸಿತ್ತು. ರಸ್ತೆ ಸಾರಿಗೆ ಸಂಸ್ಥೆಯ ಕಾಯ್ದೆ 1950ರ ಪರಿಚ್ಛೇದ ರೀತ್ಯಾ 1961 ರಲ್ಲಿ ಎಂ.ಜಿ.ಆರ್.ಟಿ.ಡಿ ಸಂಸ್ಥೆಯಾಗಿ ರೂಪಿತವಾಗಿ ಮೈಸೂರು ರಸ್ತೆ ಸಾರಿಗೆ ಸಂಸ್ಥೆ ಎಂದು ಕರೆಯಲ್ಪಟ್ಟಿತು. ನಂತರ 1973 ರಿಂದ ಕೆ.ಎಸ್.ಆರ್.ಟಿ.ಸಿ ಎಂದು ಮರುನಾಮಕರಣ ಮಾಡಲಾಯಿತು. ಸಂಸ್ಥೆಯ ಮೊದಲ ವಾಹನವನ್ನು ಕರಾರಸಾ ನಿಗಮದ ಕೇಂದ್ರ ಕಛೇರಿಯ…