ರಾಜ್ಯದಲ್ಲಿ ಕುಗ್ಗಿದ BJP ಶಕ್ತಿ..! ಕಾಂಗ್ರೆಸ್‌‌ ಸ್ಥಿತಿ ಹೇಗಿರುತ್ತೆ? JDS ಚೇತರಿಸಿಕೊಳ್ಳುತ್ತಾ?

ಬೆಂಗಳೂರು: ಲೋಲಸಭಾ ಚುನಾವಣೆಗೆ ಇನ್ನೇನು 5-6 ತಿಂಗಳುಗಳಷ್ಟೇ ಇದ್ದು ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಅದರಲ್ಲೂ ಮೋದಿ ಆಧಿಕಾರ ಯುಗವನ್ನು ಅಂತ್ಯಗೊಳಿಸಲು ಪ್ರತಿಪಕ್ಷಗಳು ಚಕ್ರವ್ಯೂಹ ರೂಪಿಸುತ್ತಿವೆ. ಈ ಸಂಬಂಧ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿದ್ದು ಮುಂಬರುವ ಲೋಕಸಭಾ ಸಮರ ತೀವ್ರ ಕುತೂಹಲ ಕೆರಳಿಸಿದೆ. ಇತ್ತ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕಸರತ್ತು ಕೂಡಾ ಗಮನಸೆಳೆದಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮಗಳು ನಡೆಸುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆ ತೀವ್ರ ಕುತೂಹಲ ಸೃಷ್ಟಿಸುತ್ತಿದೆ. ಈ ಪೈಕಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ ಅನಾವರಣ ಮಾಡಿರುವ ಫಲಿತಾಂಶ ಅನೇಕಾನೇಕ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ. ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ  ಪ್ರಕಾರ ಈಗಲೇ ಲೋಕಸಭಾ ಚುನಾವಣೆ ನಡೆದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ NDA 307 ಸ್ಥಾನಗಳನ್ನು ಗೆದ್ದು ಅಧೀಕಾರದಲ್ಲಿ ಮುದುವರಿಯಲಿದೆ. ಪ್ರತಿಪಕ್ಷಗಳ ಒಕ್ಕೂಟವಾಗಿರುವ ‘ಇಂಡಿಯಾ’ ಮೈತ್ರಿಕೂಟ 175 ಸ್ಥಾನಗಳನ್ನು…