ಆಂಗ್ಲರ ನಾಡಲ್ಲೂ ಕರುನಾಡ ವೈಭವ; ‘ಕನ್ನಡ ಡಿಂಡಿಮ’ಕ್ಕೆ ಸಾಕ್ಷಿಯಾದ ಲಂಡನ್ ಮಂದಿ

📝 ಡಾ.ನೀರಜ್ ಪಾಟೀಲ್, ಯುನೈಟೆಡ್ ಕಿಂಗ್‌ಡಮ್ ಸಾಗರೋತ್ತರ ರಾಷ್ಟ್ರ, ಆಂಗ್ಲರ ನಾಡಿನಲ್ಲೂ ಕನ್ನಡದ ಕಂಪು ಆವರಿಸಿದೆ. ಲಂಡನ್‌ಗೂ ಕರುನಾಡಿನ ಆರಾಧ್ಯ ದೈವ ವಿಶ್ವಗುರು ಬಸವೇಶ್ವರರನ್ನು ಕೊಂಡೊಯ್ದಿರುವ ಕನ್ನಡಿಗರು, ಇದೀಗ ಕನ್ನಡ ರಾಜ್ಯೋತ್ಸವವನ್ನೂ ನಾಡಭಕ್ತಿಯ ವೈಭವದೊಂದಿಗೆ ಆಚರಿಸಿದ್ದಾರೆ. ಕನ್ನಡ ರಾಜೋತ್ಸವದ ಮುನ್ನಾದಿನದಂದು, ಲಂಡನ್‌ನಲ್ಲಿರುವ ಕನ್ನಡಿಗರು ಕರುನಾಡಿನ ಶ್ರೀಮಂತ ಪರಂಪರೆ, ಭಾಷೆ ಮತ್ತು ಸಂಸ್ಕೃತಿ ವೈಭವದ ಪ್ರತೀಕವಾಗಿ ಆಚರಿಸಿದರು. ಪ್ರತೀ ವರ್ಷ ನವೆಂಬರ್ 1 ರಂದು ಲಂಡನ್‌ನಲ್ಲೂ ಅನಿವಾಸಿ ಕನ್ನಡಿಗರು ಕನ್ನಡ ರಾಜೋತ್ಸವ ಆಚರಿಸಿ ಕರ್ನಾಟಕ ರಚನೆಯನ್ನು ಸ್ಮರಿಸುತ್ತಾರೆ. ಇದು ವಿಶ್ವಾದ್ಯಂತ ಕನ್ನಡಿಗರಿಗೆ ಹೆಮ್ಮೆ ಮತ್ತು ಏಕತೆಯ ದಿನವಾಗಿದೆ. ಈ ಸಂದರ್ಭವು ಕರ್ನಾಟಕ ಮತ್ತು ಭಾರತವನ್ನು ತಮ್ಮ ಮನೆ ಎಂದು ಕರೆಯುವ ಪ್ರತಿಯೊಬ್ಬರ ಏಕತೆ, ಹೆಮ್ಮೆ ಮತ್ತು ಹಂಚಿಕೆಯ ಹೆಗ್ಗುರುತನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ವೈವಿಧ್ಯಮಯ ಸಂಪ್ರದಾಯಗಳು, ಕಲಾ ಪ್ರಕಾರಗಳು ಮತ್ತು ಭಾಷಾ ಪರಂಪರೆಗೆ ಗೌರವವಾಗಿ, ನಾವು ಕನ್ನಡ ಭಾಷೆ ಮತ್ತು…

ಲಂಡನ್‌ನ ಲ್ಯಾಂಬೆತ್ ಬಸವೇಶ್ವರ ಪ್ರತಿಮೆಗೆ ನಟಿ ಪೂಜಾಗಾಂಧಿ ದಂಪತಿ ಗೌರವ; ಮುಂಗಾರು ಮಳೆ ಬೆಡಗಿಗೆ ಸಾಗರೋತ್ತರ ಕನ್ನಡಿಗರ ಸನ್ಮಾನ

ಲಂಡನ್: ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಮತ್ತು ವಿಜಯ ಘೋರ್ಪಡೆ ದಂಪತಿ ಲಂಡನ್‌ನಲ್ಲಿ ಶ್ರೀ ಬಸವೇಶ್ವರ ವಿಗ್ರಹ ಸ್ಥಳಕ್ಕೆ ಭೇಟಿ ಕನ್ನಡಿಗರ ಜೊತೆ ಸಮಾಲೋಚನೆ ನಡೆಸಿ ಗಮನಸೆಳೆದರು. ಬ್ರಿಟಿಷ್ ಇಂಡಿಯನ್ ಮತ್ತು ಕನ್ನಡ ಸಮುದಾಯದ ಸದಸ್ಯರು ಕೂಡ ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಯುಕೆ ಮೂಲದ ಬಸವ ಸಮಿತಿ ಸಂಯುಕ್ತವಾಗಿ ಆಯೋಜಿಸಿ ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ದಂಪತಿ ಭಾಗವಹಿಸಿದರು. UK ಕನ್ನಡ ಬಳಗ ಮತ್ತು ಕನ್ನಡಿಗರು UK ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಮಹತ್ವದ ಸಹಭಾಗಿಗಳಾಗಿದ್ದವು. ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಪೂಜಾ ಗಾಂಧಿ ದಂಪತಿಯನ್ನು ಅಭಿನಂದಿಸಿದರು. ‘ಕನ್ನಡಿಗರು UK’ ಅಧ್ಯಕ್ಷ ಗಣಪತಿ ಭಟ್, ಯುಕೆ ಮೂಲದ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿಜಿತ್ ಸಲೀಮತ್, ಮಿರ್ಗಿ ರಂಗನಾಥ್ ಮತ್ತು ಶರಣ್ ಭೇಮಳ್ಳಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.…