ಬೆಂಗಳೂರು: ರಾಜ್ಯದ ಹಲವೆಡೆ ಮಾರಾಟವಾಗುವ ಆಹಾರೋತ್ಪನ್ನಗಳು ಎಷ್ಟು ಸುರಕ್ಷೆ ಎಂಬ ಪ್ರಶ್ನೆ ಉದ್ಭವವಾಗಿದೆ. ಬೆಂಗಳೂರು-ಮಂಗಳೂರು ಸಹಿತ ರಾಜ್ಯದ ಹಲವೆಡೆ ನಿಷೇಧಿತ ಚೈನೀಸ್ ಸಾಲ್ಟ್ ಬಳಕೆ ಮಾಡಿರುವ ಆಹಾರ ಮಾರಾಟ ದಂಧೆ ಎಗ್ಗಿಲ್ಲದೆ ಸಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಬಹುತೇಕ ಹೊಟೇಲು ವ್ಯವಹಾರದ ಹೆಸರಲ್ಲಿ ನಡೆಯುತ್ತಿರುವ ಈ ಅಕ್ರಮದ ಬಗ್ಗೆ ಆಹಾರ ಇಲಾಖೆಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆಕ್ರೋಶ ಪ್ರಜ್ಞಾವಂತ ನಾಗರೀಕರದ್ದು. ಇದೇ ವೇಳೆ, ಮಕ್ಕಳ ತಿಂಡಿಗಳ ಮಾರಾಟದಲ್ಲೂ ಅಕ್ರಮಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆ ಎಂಬಂತಿದೆ ನೆಲಮಂಗಲ ಸಮೀಪದ ಪ್ರಕರಣ. ನಿಗೂಢ ಮಾಫಿಯಾವು ಅವಧಿ ಮೀರಿದ ಮಕ್ಕಳ ತಿಂಡಿ ಪ್ಯಾಕೇಟ್ಗಳಿಗೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಮಾದನಾಯಕನಹಳ್ಳಿ ಠಾಣಾ ಇನ್ಸ್ಪೆಕ್ಟರ್ ಮುರಳೀಧರ್ ನೇತೃತ್ವದ ಪೊಲೀಸರು ಬೇಧಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ವೇರ್ಹೌಸ್ನಲ್ಲಿ ಈ ದಂಧೆಯನ್ನು ಪತ್ತೆ ಮಾಡಿರುವ…