ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಭಾರಿಸಿರಬಹುದು, ಆದರೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗಿರುವುದನ್ನು ಆ ಫಲಿತಾಂಶ ತೋರಿಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರೂ ಆದ, ಶಾಸಕ ರಮೇಶ್ ಬಾಬು ವಿಶ್ಲೇಷಿಸಿದ್ದಾರೆ. ಸಂಸದೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಅವರು, ಬಿಹಾರ ಫಲಿತಾಂಶ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಸೋಲನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಅದೇ ಸಮಯದಲ್ಲಿ ರಾಜಕೀಯ ಪಕ್ಷವಾಗಿ ಮತ್ತು ಪಕ್ಷವಾಗಿ ಗೌರವದಿಂದ ಹೇಳಿಕೊಳ್ಳುವುದರೊಂದಿಗೆ, ಬಿಜೆಪಿ ಹಲವಾರು ಅಂಶಗಳಿಗೆ ಜವಾಬ್ದಾರರಾಗಿರಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ. ಬಿಹಾರದಲ್ಲಿ 2025 ರ ಎನ್ಡಿಎಯ ಗೆಲುವು ಪ್ರಭಾವಶಾಲಿಯಾಗಿದ್ದರೂ, ಫಲಿತಾಂಶವನ್ನು ಆಳವಾಗಿ ಗಮನಿಸಿದರೆ, ನರೇಂದ್ರ ಮೋದಿಗೆ ವೈಯಕ್ತಿಕವಾಗಿ ಹಿನ್ನಡೆಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ರಮೇಶ್ ಬಾಬು ಬೊಟ್ಟುಮಾಡಿದ್ದಾರೆ. 2010ರಲ್ಲಿ ಎಲ್.ಕೆ.ಅಡ್ವಾಣಿ ಇನ್ನೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದಾಗ ಬಿಹಾರದಲ್ಲಿ ಬಿಜೆಪಿ…
