ಭಾರತ ಸರ್ಕಾರವು ‘PAN 2.0’ ಯೋಜನೆಯನ್ನು ಪ್ರಾರಂಭಿಸುವುದರೊಂದಿಗೆ ಡಿಜಿಟಲ್ ರೂಪಾಂತರದತ್ತ ಮಹತ್ವಪೂರ್ಣ ಹೆಜ್ಜೆ ಇಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಉಪಕ್ರಮವನ್ನು ಕೈಗೊಂಡಿಡೇ. ಇದರ ಪ್ರಾಥಮಿಕ ಗುರಿ ತೆರಿಗೆದಾರರ ಗುರುತನ್ನು ಆಧುನೀಕರಿಸಿ ಭದ್ರತೆ ಮತ್ತು ದಕ್ಷತೆಯನ್ನು ಖಚಿತಪಡಿಸುವುದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿರುವ ‘PAN 2.0’, ವರ್ಧಿತ ಕಾರ್ಯಕ್ಷಮತೆ ಮತ್ತು ದೃಢೀಕರಣಕ್ಕಾಗಿ QR ಕೋಡ್‌ಗಳನ್ನು ಸಂಯೋಜಿಸುತ್ತದೆ. 1,435 ಕೋಟಿ ರೂ.ಗಳ ಮೀಸಲಾದ ಬಜೆಟ್‌ನೊಂದಿಗೆ, ಈ ಯೋಜನೆಯು ತೆರಿಗೆ ಸಂಬಂಧಿತ ಕಾರ್ಯಗಳನ್ನು ಸುಗಮಗೊಳಿಸಲು ಮತ್ತು ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಸಜ್ಜಾಗಿದೆ. ‘PAN 2.0’ ಯೋಜನೆ ಎಂದರೇನು? ‘PAN 2.0’ ಒಂದು ಹೊಸ ಮತ್ತು ಸುಧಾರಿತ ಇ-ಆಡಳಿತ ವ್ಯವಸ್ಥೆಯಾಗಿದೆ, ಇದು ತೆರಿಗೆದಾರರ ನೋಂದಣಿಯನ್ನು ಸರಳಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆ PAN (ಶಾಶ್ವತ ಖಾತೆ ಸಂಖ್ಯೆ) ಮತ್ತು TAN (ತೆರಿಗೆ ಕಡಿತ ಮತ್ತು…
Tag: Nava Karnataka Kannada
‘ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆ; ಪರಿಷ್ಕೃತ ದರ ಫೆ.9 ರಿಂದ ಜಾರಿಗೆ
ಬೆಂಗಳೂರು: ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಯಾಗಿಡೇ. ಈ ಸಂಬಂಧ BMRCL ಅಧಿಕೃತ ಪ್ರಕಟಣೆ ಹೊರಡಿಸಿದೆ. 8 ವರ್ಷಗಳ ಬಳಿಕ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಯಾಗಿದೆ ಎನ್ನಲಾಗುತ್ತಿದ್ದು, ಪರಿಷ್ಕೃತ ದರ ಫೆ.9 ರಿಂದ ಜಾರಿಗೆ ಬರಲಿದೆ. ಪ್ರಯಾಣ ದರ ಶೇ.46 ರಷ್ಟು ಏರಿಕೆ ಮಾಡಲಾಗಿದ್ದು 10 ರೂಪಾಯಿಯಿಂದ 90 ರೂಪಾಯಿ ವರೆಗೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದರು.
“ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ” ಮೋದಿ ಸಂದೇಶ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ ಗೆದ್ದು ಬೀಗಿದೆ. ಕಾರ್ಯಕರ್ತರ ಜಯಘೋಷ ಮುಗಿಲುಮುಟ್ಟಿದೆ. ಈ ಸನ್ನಿವೇಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ. ಜನಶಕ್ತಿಯೇ ಸರ್ವಶ್ರೇಷ್ಠ! ಅಭಿವೃದ್ಧಿ ಗೆಲ್ಲುತ್ತದೆ, ಉತ್ತಮ ಆಡಳಿತ ಗೆಲ್ಲುತ್ತದೆ ಎಂದವರು ಹೇಳಿದ್ದಾರೆ. ದೆಹಲಿ ಚುನಾವಣಾ ಫಲಿತಾಂಶ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಪ್ರತಿಕ್ರಿಯಿಸಿರುವ ಮೋದಿ, ಬಿಜೆಪಿಗೆ ಈ ಅದ್ಭುತ ಮತ್ತು ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ನಮಸ್ಕರಿಸುತ್ತೇನೆ. ಈ ಆಶೀರ್ವಾದಗಳನ್ನು ಸ್ವೀಕರಿಸಲು ನಮಗೆ ವಿನಮ್ರತೆ ಮತ್ತು ಗೌರವವಿದೆ ಎಂದಿದ್ದಾರೆ. ದೆಹಲಿಯನ್ನು ಅಭಿವೃದ್ಧಿಪಡಿಸುವಲ್ಲಿ, ಜನರ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮತ್ತು ವಿಕ್ಷಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿಗೆ ಪ್ರಮುಖ ಪಾತ್ರವಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದವರು ಭರವಸೆ ನೀಡಿದ್ದಾರೆ. Jana Shakti is paramount! Development wins, good governance…