ದೆಹಲಿ : ದೇಶದ ಗಡಿ ಕಾಯುವ ವೀರ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸುವ ಪ್ರಧಾನಿ ಮೋದಿ, ಈ ಬಾರಿ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಭಾರತೀಯ ಸೇನೆಯ ಯೋಧರ ಜೊತೆ ಬೆಳಕಿನ ಹಬ್ಬ ಆಚರಿಸಿದ್ದಾರೆ. ಭಾರತ ಮತ್ತು ಚೀನಾ ಗಡಿಯ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ದೀಪಾವಳಿ ಸಂಭ್ರಮಾಚರಣೆ ಮೂಲಕ ದೇಶದ ಗಮನ ಸೆಳೆದರು. ಭಾನುವಾರ ಬೆಳಗ್ಗೆ ಸೈನಿಕರಿಗೆ ಸಿಹಿ ಹಂಚಿ, ಉಡುಗೊರೆಗಳನ್ನು ನೀಡಿದರು. ಅವರೊಂದಿಗೆ ಜೊತೆ ಸಂವಾದ ನಡೆಸಿದರು. ಈ ಕುರಿತ ಫೋಟೋಗಳನ್ನೂ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. Spending Diwali with our brave security forces in Lepcha, Himachal Pradesh has been an experience filled with deep emotion and pride. Away from their families, these guardians of our nation illuminate our…