‘ಇಡೀ ಸಮಾಜವನ್ನು ‘ಸಜ್ಜನ ಶಕ್ತಿ’ ನಾಯಕತ್ವದಲ್ಲಿ ಒಟ್ಟಿಗೆ ಕೊಂಡೊಯ್ಯುತ್ತೇವೆ’: RSS ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ನಾಗ್ಪುರ: ಆರ್‌ಎಸ್‌ಎಸ್ ಯಾರನ್ನೂ ವಿರೋಧಿಸುವುದರಲ್ಲಿ ನಂಬಿಕೆ ಇಡುವುದಿಲ್ಲ ಅಷ್ಟೇ ಅಲ್ಲ, ನಮ್ಮನ್ನು ವಿರೋಧಿಸುವವರು ಮುಂದೊಂದು ದಿನ ನಮ್ಮ ಗುಂಪಿಗೆ ಸೇರುತ್ತಾರೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಕಳೆದ 100 ವರ್ಷಗಳಲ್ಲಿ, ರಾಷ್ಟ್ರೀಯ ಪುನರ್ನಿರ್ಮಾಣದ ಚಳುವಳಿಯಾಗಿ ಸಂಘವು ನಿರ್ಲಕ್ಷ್ಯ ಮತ್ತು ಅಪಹಾಸ್ಯದಿಂದ ಕುತೂಹಲ ಮತ್ತು ಸ್ವೀಕಾರದತ್ತ ಸಾಗಿದೆ ಎಂದು ಅವರು ಗಮನಸೆಳೆದಿದ್ದಾರೆ. ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಸೇವೆಯ ನೂರನೇ ವರ್ಷವನ್ನು ಪೂರ್ಣಗೊಳಿಸುತ್ತಿರುವಾಗ, ಸಂಘವು ಈ ಹೆಗ್ಗುರುತನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಕುತೂಹಲವಿದೆ. ಅಂತಹ ಸಂದರ್ಭಗಳು ಆಚರಣೆಗಾಗಿ ಅಲ್ಲ, ಆದರೆ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಆ ಉದ್ದೇಶಕ್ಕೆ ಪುನರ್ ಸಮರ್ಪಿಸಲು ನಮಗೆ ಅವಕಾಶವನ್ನು ಒದಗಿಸುತ್ತವೆ ಎಂಬುದು ಸಂಘಕ್ಕೆ ಪ್ರಾರಂಭದಿಂದಲೂ ಸ್ಪಷ್ಟವಾಗಿದೆ. ಚಳುವಳಿಗೆ ಮಾರ್ಗದರ್ಶನ ನೀಡಿದ ಧೀಮಂತ, ಸಂತ ವ್ಯಕ್ತಿಗಳ ಕೊಡುಗೆಗಳನ್ನು ಮತ್ತು ಈ ಪ್ರಯಾಣದಲ್ಲಿ ನಿಸ್ವಾರ್ಥವಾಗಿ…

RSS ಮುಟ್ಟಿದರೆ ಸರ್ವನಾಶ ಆಗ್ತೀರಿ.. ತಾಕತ್ತಿದ್ದರೆ ಮುಟ್ಟಿ ನೋಡಿ.. ಕಾಂಗ್ರೆಸ್ ವಿರುದ್ದ ತೊಡೆ ತಟ್ಟಿದ ಆರ್.ಅಶೋಕ್

ಕಲಬುರಗಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಗೂಂಡಾ ಸಂಸ್ಕೃತಿ ತಲೆ ಎತ್ತುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುದ ಅವರು, ಬಿಜೆಪಿ ಕಾರ್ಯಕರ್ತನ ಮೇಲೆ ಕಲಬುರಗಿಯಲ್ಲಿ ವಿನಾ ಕಾರಣ ಹಲ್ಲೆ ನಡೆಸಿರುವ ಘಟನೆ ಇದಕ್ಕೆ ಸಾಕ್ಷಿ. ಉಡುಪಿಯಲ್ಲಿ ಇಬ್ಬರು ಭಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲಾಗಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23 ಹಿಂದೂಗಳ ಹತ್ಯೆ ಮಾಡಲಾಯಿತು. ಎಲ್ಲೆಡೆ ಹಿಂದೂಗಳನ್ನು ಗುರಿಯಾಗಿಸಿ ಹಲ್ಲೆ, ಹತ್ಯೆ ಯತ್ನಗಳು ಹೆಚ್ಚುತ್ತಿವೆ. ಇದು ಗೂಂಡಾ ರಾಜ್ಯವಾಗಿ ಪರಿವರ್ತನೆ ಆಗಿದೆ ಎಂದು ದೂರಿದರು. RSS ಸಂಘಟನೆಯನ್ನು ಮುಟ್ಟಿದ್ರೆ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂದು ಅಶೋಕ್ ಎಚ್ಚರಿಕೆ ನೀಡಿದರು. ಸರ್ಕಾರದ ಇಲಾಖೆಗಳು ಬಿಜೆಪಿ ಅವಧಿಯಲ್ಲಿ RSS ಶಾಖೆಗಳಾಗಿದ್ದವು, ಈಗ ಅವುಗಳನ್ನು ಕ್ಲೀನ್ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಬಗ್ಗೆ ಕಿಡಿ ಕಾರಿದ ಅಶೋಕ್, ಧಮ್ಮು ತಾಕತ್ತು ಇದ್ದರೆ…