ಮಂಗಳೂರು: ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾ! ಅಕ್ರಮ ದಂಧೆ ಬಗ್ಗೆ ಅಧಿಕಾರಿಗಳ ಮೌನವೇಕೆ? CSಗೆ ಪರಿಸರ ಹೋರಾಟಗಾರ ಆಲ್ವಿನ್ ದೂರು

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತಾಂಡವವಾಡುತ್ತಿರುವ ಮರಳು ಮಾಫಿಯಾ ವಿರುದ್ಧ ರಣಕಹಳೆ ಮೊಳಗಿದೆ. ಮಂಗಳೂರು ಹೊರವಲಯದ ‘ಉಳಿಯ’ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿರುವಂತೆಯೇ, ಮರಳು ಮಾಫಿಯಾ ಜೊತೆ ಜಿಲ್ಲೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಹಿರಿಯ ಪತ್ರಕರ್ತರೂ ಆದ ಪರಿಸರ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರು ಈ ದೂರನ್ನು ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧವೇ ಆದ್ಯ ಕ್ರಮವಾಗಬೇಕಿದೆ ಎಂದು ಗಮನಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು ನದಿಯನ್ನು ಆವರಿಸಿಕೊಂಡಿರುವ ಪ್ರದೇಶವಾಗಿದೆ. ಕುಮಾರಧಾರ, ನೇತ್ರಾವತಿ, ಫಲ್ಗುಣಿ, ನಂದಿನಿ ಸಹಿತ ಹಲವಾರು ನದಿಗಳು ಕರಾವಳಿ ಜನರ ಜೀವನಾಡಿಯಾಗಿದ್ದು, ಇದೀಗ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಮೂಲಕ್ಕೆ ಸಂಚಕಾರ ಎದುರಾಗಿದೆ. ಕರ್ನಾಟಕ ಕರಾವಳಿಯ ದೊಡ್ಡ ನದಿಗಳಲ್ಲಿ ಒಂದಾಗಿರುವ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ವ್ಯಾಪಕ…

ಮಾಧ್ಯಮ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿಷ್ಠಿತ ‘ರಾಜ್ಯ ಸಂವಹನ ಪ್ರಶಸ್ತಿ’;

ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (Public Relations Council of India- PRCI) ನೀಡುವ ‘ರಾಜ್ಯ ಸಂವಹನ ಪ್ರಶಸ್ತಿ‌’ ಪ್ರದಾನ ಸಮಾರಂಭ ಗಮನಸೆಳೆಯಿತು. ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಪ್ರಶಸ್ತಿ ಬೆಂಗಳೂರಿನಲ್ಲಿ ನೆರವೇರಿತು. PRCI ಕರ್ನಾಟಕ ಚಾಪ್ಟರ್ ಆಯೋಜಿಸಿದ್ದ ಸಮಾರಂಭದಲ್ಲಿ ಈ ಬಾರಿ ಮಾಧ್ಯಮ, ಸಂವಹನ, ಸಿನಿಮಾ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ 12 ಮಂದಿಗೆ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ, ನಿವೃತ್ತ ನ್ಯಾಯಮೂರ್ತಿ ಗಳಾದ ಡಾ. ಹೆಚ್ ಎಸ್ ಪ್ರಭಾಕರ ಶಾಸ್ತ್ರಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಮೀಡಿಯಾ ಕೌನ್ಸಿಲ್ ಅಧ್ಯಕ್ಷ ಅಲ್ವಿನ್ ಮೆಂಡೊನ್ಸಾ, ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ಡಿ.ಪಿ.ಮುರುಳಿಧರ್, ವಿಜಯಕರ್ನಾಟಕ ಮುಖ್ಯ ಸಂಪಾದಕ…