ಸ್ಟಾರ್ ಫ್ರೂಟ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಅತ್ಯುತ್ತಮ ಆಹಾರ

ಸ್ಟಾರ್ ಫ್ರೂಟ್ ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಇವುಗಳಲ್ಲಿ ವಿಟಮಿನ್ ಸಿ, ಬಿ2, ಬಿ6, ಬಿ9 ವಿಟಮಿನ್‌ಗಳು, ಫೈಬರ್, ಪೊಟ್ಯಾಸಿಯಮ್, ಸತು, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಫೋಲೇಟ್, ತಾಮ್ರ, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಸ್ಟಾರ್ ಫ್ರೂಟ್ ಕೊಲೆಸ್ಟ್ರಾಲ್ ನನ್ನೆಯ ಕ್ರಿಯೆಯನ್ನು ತಡೆದು ರಕ್ತದಿಂದ ಕೊಬ್ಬಿನ ಅಣುಗಳನ್ನು ತೆಗೆದುಹಾಕುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಲು ಇದು ಉಪಯುಕ್ತವಾಗಿದೆ. ಅಲ್ಲದೇ, ತೂಕ ಇಳಿಕೆಗೂ ಸಹಾಯಕಾರಿಯಾಗಿರುವ ಈ ಹಣ್ಣಿನಲ್ಲಿರುವ ನಾರಿನಂಶವು ಚಯಾಪಚಯವನ್ನು ಸರಳಗೊಳಿಸುತ್ತದೆ.