ಮುಂಬೈ ದಾಳಿಕೋರ ತಹವ್ವೂರ್ ರಾಣಾನನ್ನು ಕರೆತಂದ ಮೋದಿ ಸರ್ಕಾರಕ್ಕೆ ಅಭಿನಂದನೆ ಎಂದ ಇಸ್ರೇಲ್

ನವದೆಹಲಿ: 26/11 ರ ಸಂಚುಕೋರ ತಹವ್ವೂರ್ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸುವುದನ್ನು ಸ್ವಾಗತಿಸಿರುವ ಇಸ್ರೇಲ್, ಭಯೋತ್ಪಾದಕರ ವಿರುದ್ದದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೋರಿದ ನಿರಂತರ ಪ್ರಯತ್ನಕ್ಕೆ ಸಂದ ಜಯ ಎಂದು ಬಣ್ಣಿಸಿದೆ. 🚨 BIG BREAKING NEWS 26/11 mastermind Tahawwur Rana has ARRIVED in India, following his EXTRADITION from US [Bharti Jain/TOI] 🔥 — NIA will take him into custody. pic.twitter.com/ELPwS28L5L — Megh Updates 🚨™ (@MeghUpdates) April 10, 2025 “2008 ರ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಭೀಕರ ಮತ್ತು ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಇಸ್ರೇಲಿಗಳು ಸೇರಿದಂತೆ 170 ಕ್ಕೂ ಹೆಚ್ಚು ಅಮಾಯಕ ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ರೂವಾರಿಗಳಲ್ಲಿ ಒಬ್ಬನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ…

ಮುಂಬೈ ದಾಳಿಯ ಸೂತ್ರದಾರ ತಹವ್ವೂರ್ ರಾಣಾ 18 ದಿನಗಳ NIA ಕಸ್ಟಡಿಗೆ

ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ನವದೆಹಲಿಯಲ್ಲಿರುವ ವಿಶೇಷ ರಾಷ್ಟ್ರೀಯ ತನಿಖಾ ಕೋರ್ಟ್ 18 ದಿನಗಳ NIA ಕಸ್ಟಡಿಗೆ ಒಪ್ಪಿಸಿದೆ. ಮುಂಬೈ ದಾಳಿಯ ಸೂತ್ರದಾರ ಎನ್ನಲಾದ ತಹವ್ವೂರ್ ರಾಣಾನನ್ನು ಅಮೆರಿಕಾವನ್ನು ಭಾರತಕ್ಕೆ ಒಪ್ಪಿಸಿದೆ. ಗುರುವಾರ ಆತನನ್ನು ಭಾರತಕ್ಕೆ ಕರೆತಂದು ಅಧಿಕೃತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮನವಿಯ ಹಿನ್ನೆಲೆಯಲ್ಲಿ ಕೋರ್ಟ್ ರಾಣಾನನ್ನು ತನಿಖಾಧಿಕಾರಿಗಳ ವಶಕ್ಕೆ ನೀಡಿದೆ.