ಲಂಡನ್: ಸ್ಯಾಂಡಲ್ವುಡ್ ನಟಿ ಪೂಜಾ ಗಾಂಧಿ ಮತ್ತು ವಿಜಯ ಘೋರ್ಪಡೆ ದಂಪತಿ ಲಂಡನ್ನಲ್ಲಿ ಶ್ರೀ ಬಸವೇಶ್ವರ ವಿಗ್ರಹ ಸ್ಥಳಕ್ಕೆ ಭೇಟಿ ಕನ್ನಡಿಗರ ಜೊತೆ ಸಮಾಲೋಚನೆ ನಡೆಸಿ ಗಮನಸೆಳೆದರು. ಬ್ರಿಟಿಷ್ ಇಂಡಿಯನ್ ಮತ್ತು ಕನ್ನಡ ಸಮುದಾಯದ ಸದಸ್ಯರು ಕೂಡ ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಯುಕೆ ಮೂಲದ ಬಸವ ಸಮಿತಿ ಸಂಯುಕ್ತವಾಗಿ ಆಯೋಜಿಸಿ ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ದಂಪತಿ ಭಾಗವಹಿಸಿದರು. UK ಕನ್ನಡ ಬಳಗ ಮತ್ತು ಕನ್ನಡಿಗರು UK ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಮಹತ್ವದ ಸಹಭಾಗಿಗಳಾಗಿದ್ದವು. ಲ್ಯಾಂಬೆತ್ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಪೂಜಾ ಗಾಂಧಿ ದಂಪತಿಯನ್ನು ಅಭಿನಂದಿಸಿದರು. ‘ಕನ್ನಡಿಗರು UK’ ಅಧ್ಯಕ್ಷ ಗಣಪತಿ ಭಟ್, ಯುಕೆ ಮೂಲದ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿಜಿತ್ ಸಲೀಮತ್, ಮಿರ್ಗಿ ರಂಗನಾಥ್ ಮತ್ತು ಶರಣ್ ಭೇಮಳ್ಳಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.…