ಡಿಕೆಶಿ ಪ್ರಕರಣ ಹಿಂತೆಗೆತದ ಪ್ರತಿಧ್ವನಿ; ಜನಸಾಮಾನ್ಯರ ಬಗ್ಗೆ ‘ಹೈ’ ತೀರ್ಪು ಒಪ್ಪದ ಸರ್ಕಾರಕ್ಕೆ ‘ಲೀಗಲ್-ಐ’ ಚಾಟಿ

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಕೈಗೊಂಡ ತೀರ್ಮಾನದ ಬಳಿಕ ಇತರ ಪ್ರಕರಣಗಳ ವಿಚಾರದಲ್ಲೂ ಜನಹಿತ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಪ್ರತಿಧ್ವನಿಸಿದೆ. ಇದೀಗ ರೌಡಿ ಪಟ್ಟಿ ವಿಚಾರ ರಾಜ್ಯ ಸರ್ಕಾರಕ್ಕೆ ಸವಾಲು ಎಂಬಂತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಯ ಆದೇಶ ಹಿಂಪಡೆಯುವ ಸಂಪುಟ ಸಭೆ ತೀರ್ಮಾನದಂತೆಯೇ ಇತರ ಪ್ರಕರಣಗಳಲ್ಲೂ ಜನಹಿತ ಕ್ರಮ ಕೈಗೊಳ್ಳಲು ಕೋರಿ ವಕೀಲರ ಸಮೂಹದ ಸಂಸ್ಥೆ “ಲೀಗಲ್-ಐ’ ಮುಖ್ಯಸ್ಥ ಶಾಜಿ ಟಿ ವರ್ಗೀಸ್ (Shaji T Verghese) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಕುತೂಹಲದ ಕೇಂದ್ರಬಿಂದುವಾಗಿದೆ. ಅದರಲ್ಲೂ ಅಮಾಯಕರು ರೌಡಿ ಶೀಟರ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು ಅವರಿಗೆ ನ್ಯಾಯ ಸಿಗಬೇಕೆಂಬ ಪ್ರತಿಪಾದನೆ ಕುತೂಹಲಕಾರಿ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವು ರೌಡಿ ಶೀಟರ್ ವಿಚಾರದಲ್ಲಿ ಹೈಕೋರ್ಟ್ ಆದೇಶವನ್ನೇ ಅನುಷ್ಠಾನಗೊಳಿಸಿಲ್ಲ. ನ್ಯಾಯಬದ್ಧ ಕ್ರಮಕ್ಕ್ಕಾಗಿ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು…