ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಬೆಂಗಳೂರಿನ HSR ಲೇಔಟ್ ಬಳಿಯ ಪ್ರತಿಷ್ಠಿತ ಮೌಂಟ್ ಲಿಟೆರಾ ಜೀ ಸ್ಕೂಲ್ ಸಂಸ್ಥೆಗೊಳಪಟ್ಟ ಶಾಲೆಯ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೋರ್ಟ್ ಆದೇಶದಂತೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪ್ರತಿಷ್ಠಿತ ಸಂಶಿಧ್ ಎಜುಕೇಶನಲ್ ಸೊಸೈಟಿ ಮಾಲೀಕತ್ವದ ಶಾಲೆ ವಿರುದ್ಧ ಬೇರೆ ಕಂಪನಿಯ ಲೋಗೋ ಬಳಸಿ ಹಣ ವಂಚಿಸಿದ ಆರೋಪ ಇದೆ. ZEE LEARN LIMITED ಕಂಪನಿ ಲೋಗೋ ಬಳಕೆಯ ಆರೋಪ ಇದಾಗಿದ್ದು, ವಿವಾದ ಸಂಬಂಧ ಸಂಶಿದ್ ಎಜುಕೇಶನ್ ಸೊಸೈಟಿ ಮಾಲೀಕ ವಾಸ ಶ್ರೀನಿವಾಸ್ ರಾವ್ ಅವರ ವಿರುದ್ದ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ಎಫ್ಐಅರ್ ಆಧಾರದಲ್ಲಿ HSR ಲೇಔಟ್ ಬಳಿಯ ಶಾಲೆ ಮೇಲೆ ಪೊಲೀಸರು…