ಒಡಿಶಾ ರೈಲು ದುರಂತ; ಹೆಚ್ಚುತ್ತಲೇ ಇರುವ ಸಾವಿನ ಸಂಖ್ಯೆ.. ನಿಜವಾಗಿಯೂ ಆಗಿದ್ದೇನು ಗೊತ್ತೇ?

ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ.

  • ಶುಕ್ರವಾರ ಸಂಜೆ 50 ಮಂದಿಯಷ್ಟೇ ಸಾವನ್ನಪ್ಪಿದ್ದ ಬಗ್ಗೆ ಮಾಹಿತಿ ಇತ್ತು.
  • ಶನಿವಾರ ಬೆಳಿಗ್ಗೆ ಈ ಸಂಖ್ಯೆ 200 ದಾಟಿತ್ತು.
  • ಶನಿವಾರ ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಈ ಸಂಖ್ಯೆ 280 ಕ್ರಮಿಸಿದೆ.

ಈ ನಡುವೆ 900ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದು ಹಲವರ ಸ್ಥಿತಿ ಚಿಂತಾಜನಕವಾಗಿದೆ. ಹಲವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಆಗಿದ್ದಾದರೂ ಏನು?

ಒಡಿಶಾದ ಬಾಲಸೋರ್​​ನ
ಬಹನಾಗಾ ರೈಲು ನಿಲ್ದಾಣ ಬಳಿ ಮೂರು ಪ್ರತ್ಯೇಕ ರೈಲು ಮಾರ್ಗಗಳಿವೆ, ಶುಕ್ರವಾರ ಸಂಜೆ ಕೋಲ್ಕತಾದ ಶಾಲಿಮಾರ್ ನಿಲ್ದಾಣದಿಂದ ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ ಮತ್ತೊಂದು ರೈಲು ಹಳಿ ಮೇಲೂ ಬಿದ್ದಿವೆ.
ಸ್ವಲ್ಪ ಹೊತ್ತಿನಲ್ಲೇ ಇದೇ ಮಾರ್ಗವಾಗಿ ಬೆಂಗಳೂರು-ಹೌರಾ ಎಕ್ಸಪ್ರೆಸ್​ ರೈಲು ಆಗಮಿಸಿದೆ.‌ ಈ ರೈಲು ಅದಾಗಲೇ ದುರಂತಕ್ಕೀಡಾಗಿದ್ದ ಕೋರಮಂಡಲ್​​ ಎಕ್ಸ್‌ಪ್ರೆಸ್‌‌ನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಆ ವೇಳೆ, ನಾಲ್ಕು ಬೋಗಿಗಳು ಹಳಿತಪ್ಪಿವೆ.

ಭಾರತದ ಇತಿಹಾಸದಲ್ಲಿ ಮೂರು ರೈಲುಗಳು ಒಟ್ಟಿಗೆ ಅಫಘಾತಕ್ಕೀಡಾಗಿರುವುದು ಅಪರೂಪದ ದುರ್ಘಟನೆ. ಸಾವಿರಾರು ಮಂದಿ ಪ್ರಯಾಣಿಸುತ್ತಿದ್ದ ರೈಲುಗಳಲ್ಲಿದ್ದ ನೂರಾರು ಮಂದಿ ಸಾವನ್ನಪ್ಪಿರುವುದೂ ದೇಶ ಕಂಡರಿಯದ ಭೀಕರ ದುರಂತ ಎನ್ನಲಾಗಿತ್ತಿದೆ.

ರೈಲ್ವೆ, NDRF, SDRF ತಂಡದಿಂದ ರಕ್ಷಣಾ ಕಾರ್ಯ ನಡೆದಿದೆ. ಇದೇ ವೇಳೆ, ರೈಲು ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ. ಪ್ರಕರಣದ ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದಿರುವ ರೈಲ್ವೇ ಸಚಿವ ಆಶ್ವಿನಿ ವೈಷ್ಣವ್, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Related posts