ಕಡಲತಡಿಯಲ್ಲಿ ತುರ್ತು ಸಂದರ್ಭದಲ್ಲಿ ಧಾವಿಸಲಿದೆ ERSS ತಂಡ

ಉಡುಪಿ: ಅಗ್ನಿ ಶಾಮಕ ದಳ, ಪೊಲೀಸ್ ಹೊಯ್ಸಳ, ಅಆಂಬ್ಯುಲೆನ್ಸ್’ಗಳು ತುರ್ತು ಕರೆಗೆ ಧಾವಿಸಿ ಬರುವುದು ಸಾಮಾನ್ಯ. ಇನ್ನು ಮುಂದೆ ಉಡುಪಿಯಲ್ಲಿ ಅತೀ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಕರೆಗೆ ERSS ತಂಡ ಕ್ಷಣಾರ್ಧದಲ್ಲಿ ನೆರವಿಗೆ ಧಾವಿಸಲಿದೆ. ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ 12 ಇ.ಆರ್.ಎಸ್.ಎಸ್. ವಾಹನಗಳನ್ನು ಚಾಲನೆಗೊಳಿಸಲಾಗಿದೆ.

ಸಾರ್ವಜನಿಕರು ಇನ್ನು ಮುಂದಕ್ಕೆ ಟೋಲ್ ಫ್ರೀ ನಂಬರ್ 100ರ ಬದಲಾಗಿ 112ಕ್ಕೆ ಕರೆ ಮಾಡಿದಲ್ಲಿ ಅವಶ್ಯಕತೆ ಇರುವ ಸ್ಥಳಕ್ಕೆ ಅತೀ ಸಮೀಪ ಇರುವ ಇ.ಆರ್.ಎಸ್.ಎಸ್. ವಾಹನವು ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು ನೀಡಲಿದೆ. ಈ ವಾಹನಗಳು ದಿನದ 24 ಗಂಟೆಯೂ ಕಾರ್ಯಾಚರಣೆಗೆ ಸಜ್ಜಾಗಿ ನಿಂತಿವೆ.

ಟೋಲ್ ಪ್ರೀ ನಂಬರ್ 112 ನೇರವಾಗಿ ಬೆಂಗಳೂರು ಕೇಂದ್ರದ ನಿಯಂತ್ರಣದಲ್ಲಿದ್ದು, ಅಕ್ಷಾಂಶ ಹಾಗೂ ರೇಖಾಂಶದ ಆಧಾರದ ಮೇಲೆ, ಕರೆ ಬಂದ ಸ್ಥಳಕ್ಕೆ ಕ್ಷಿಪ್ರವಾಗಿ ಅಗತ್ಯ ಸೇವೆಯನ್ನು ಸಲ್ಲಿಸಲು ಪ್ರತೀ ವಾಹನದಲ್ಲಿ ಓರ್ವ ಎ.ಎಸ್.ಐ. ದರ್ಜೆಯ ಪೊಲೀಸ್ ಅಧಿಕಾರಿಯವರು ಇರುತ್ತಾರೆ. ಈ ವಾಹನಗಳು ಈ ಹಿಂದೆ ಹೆಚ್ಚಿನ ಅಪರಾಧಗಳು ನಡೆದ ಸ್ಥಳಗಳು, ಶಾಲಾ, ಕಾಲೇಜುಗಳ ಸಮೀಪ, ಜನ ದಟ್ಟಣೆ ಪ್ರದೇಶ, ಹೆಚ್ಚು ವಾಹನ ಸಂಚಾರ ಇರುವ ಪ್ರದೇಶಗಳಲ್ಲಿ ಕಾರ್ಯಾಚರಿಸಲಿದೆ.

Related posts