ಬೆಂಗಳೂರು: ಕೃಷಿ ಕ್ಷೇತ್ರಕ್ಕೆ ನಿರಾಸದಾಯಕವಾದ ಕೇಂದ್ರ ಬಜೆಟ್ ಆಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಕುರಿತಂತೆ ಪ್ರಯಿಕ್ರಿಯಿಸಿದ ಕುರುಬೂರು ಶಾಂತಕುಮಾರ್, ಭದ್ರಾ ಮೇಲ್ದಂಡೆ ಯೋಜನೆಗೆ 5360 ಕೋಟಿ ಪ್ರಕಟ ಸ್ವಾಗತಾರ್ಹ, ಬರಪಿಡಿತ ಪ್ರದೇಶದ ಜಿಲ್ಲೆಗಳಿಗೆ ಹೆಚ್ಚು ಅನುಕೂಲಕರ ತುರ್ತಾಗಿ ಕಾರ್ಯಗತವಾಗಬೇಕು ಎಂದರು.
ಬಜೆಟ್ ನಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡಿರುವುದು, ಬಡವರಿಗೆ ಒಂದು ವರ್ಷ ಉಚಿತ ಆಹಾರ ವಿತರಣೆ, ಸಿರಿಧಾನ್ಯಗಳ ಉತ್ಪಾದನೆಗೆ ಒತ್ತು ನೀಡಿರುವುದು, ಒಳ್ಳೆಯ ಬೆಳವಣಿಗೆ, ಮಧ್ಯಮ ವರ್ಗಕ್ಕೆ ಸಹಕಾರಿಯಾಗಿದೆ, ಆದರೆ ಕೃಷಿಯಿಂದ ರೈತರ ಮಕ್ಕಳು ವಲಸೆ ಹೋಗುತ್ತಿರುವುದನ್ನು ತಪ್ಪಿಸಲು ಬೇಕಾದ ಯಾವುದೇ ಯೋಜನೆಗಳು ಇಲ್ಲ ಎಂದು ಕುರುಬೂರು ಶಾಂತಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಸಿಗುವಂತಹ, ಯೋಜನೆ ಜಾರಿ ಬಗ್ಗೆ ಸ್ಪಷ್ಟ ನಿರ್ಧಾರವೆ ಇಲ್ಲ, ಪ್ರಕಟವಾಗಿಲ್ಲ, ಬಡ್ಡಿ ರಹಿತ ಸಾಲ ನೀಡುವ ಕೃಷಿ ಸಾಲ ನೀತಿಯ ಬಗ್ಗೆಯಾಗಲಿ ಯಾವುದೇ ನಿರ್ಧಾರ ಬಂದಿಲ್ಲ ಕೃಷಿ ಕ್ಷೇತ್ರಕ್ಕೆ ನಿರಾಸದಾಯಕವಾದ ಬಜೆಟ್ ಆಗಿದೆ, ಎಂದು ಅವರು ಬಣ್ಣಿಸಿದ್ದಾರೆ.