ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್’ಗೆ ಗಂಗಾ ಜಲ ನೀಡಿ ಗೌರವ

ನವದೆಹಲಿ: ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರು ತುಳಸಿ ಗಬ್ಬಾರ್ಡ್ ಅವರಿಗೆ ಗಂಗಾ ಜಲ ಮತ್ತು ಉಡುಗೊರೆಗಳನ್ನು ನೀಡಿ ಗೌರವಿಸಿದರು.

ಪ್ರಧಾನಿ ಮೋದಿ ಅವರು ಮಹಾ ಕುಂಭದಿಂದ ತಂಡ ಗಂಗಾ ಜಲವನ್ನು ನೀಡಿ, ವಿಶ್ವದ ಅತಿದೊಡ್ಡ ಧಾರ್ಮಿಕ ಕೈಂಕರ್ಯದ ಮಹತ್ವದ ಬಗ್ಗೆ ತುಳಸಿ ಗಬ್ಬಾರ್ಡ್ ಅವರಿಗೆ ವಿವರಿಸಿದರು.

“ಇದು ಮಹಾ ಕುಂಭದಿಂದ ಸಂಗ್ರಹಿಸಲಾದ ನೀರು, ಅಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾದ ತ್ರಿವೇಣಿ ಸಂಗಮದಲ್ಲಿ 45 ದಿನಗಳ ಅವಧಿಯಲ್ಲಿ ಸುಮಾರು 66 ಕೋಟಿ ಜನರು ಶ್ರದ್ಧೆಯಿಂದ ಸ್ನಾನ ಮಾಡಿದರು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿಯವರ ಕಾಣಿಕೆ ಸ್ವೀಕರಿಸಿದ ಗಬ್ಬಾರ್ಡ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Related posts