ಜನವರಿಯಲ್ಲೇ ದೇಶದ ಜನರಿಗೆ ಕೋವಿಡ್ ಲಸಿಕೆ ಲಭ್ಯ?

ದೆಹಲಿ: ಕೊರೋನಾ ಹಾವಳಿಗೆ ಬ್ರೇಕ್ ಬೀಳುತ್ತಿಲ್ಲ. ಆದರೆ ಸೋಂಕು ತಡೆಗೆ ಸಕಲ ಪ್ರಯತ್ನ ಸಾಗಿದೆ. ಇದೇ ಸಂದರ್ಭದಲ್ಲಿ ದೇಶದ ಜನತೆಗೆ ಕೋವಿಡ್ ಸೋಂಕು ನಿರೋಧಕ ಲಸಿಕೆ ನೀಡಲು ಕೇಂದ್ರ ಸರ್ಕಾರ ಕ್ರಮವಹಿಸಿದೆ. ಭಾರತದಲ್ಲಿ ಜನವರಿಯಿಂದ ದೇಶದ ಜನತೆಗೆ ಲಸಿಕೆ ವಿತರಿಸುವ ಸುಳಿವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನೀಡಿದ್ದಾರೆ.

ಜನವರಿಯಿಂದ ದೇಶದ ಜನರಿಗೆ ಕೊರೋನಾ ಲಸಿಕೆ ಸಿಗಲಿದೆ ಎಂದಿರುವ ಅವರು, ದೇಶದ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ದೇಶದ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಕೆಲಸ ಮಾಡಿದ್ದಾರೆ ಮತ್ತು ಮುಂಬರುವ ಆರರಿಂದ ಏಳು ತಿಂಗಳಲ್ಲಿ ಸುಮಾರು 30 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ.

Related posts