ಡೆತ್ ನೋಟ್’ನಲ್ಲಿ ಪೊನ್ನಣ್ಣ ಹೆಸರು, ಆದರೂ FIRನಲ್ಲಿ ಹೆಸರಿಲ್ಲ ಎಂದ ಬಿಜೆಪಿ ನಾಯಕರು

ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಪ್ರಕರಣದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವಿರುದ್ಧ ಕೇಸ್ ದಾಖಲಿಸದ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ವಿನಯ್ ಸೋಮಯ್ಯ ಕುಟುಂಬದವರು ಪ್ರಾರಂಭದಲ್ಲಿ ಕೊಟ್ಟ ದೂರಿನ “Subject” ನಲ್ಲೇ ಇಬ್ಬರೂ MLA ಗಳ ಹೆಸರು ಉಲ್ಲೇಖ ಮಾಡಿದ್ದರೂ FIR ನಲ್ಲಿ ಹೆಸರು ಕೈಬಿಟ್ಟು ದೂರಿನಲ್ಲಿ ಇರಲೇ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿನಯ್ ಸೋಮಯ್ಯ ಡೇಟ್ ನೋಟ್ ಪೋಸ್ಟ್ ಹಾಕಿರುವ ಪ್ರತಾಪ್ ಸಿಂಹ, ಈ ಪ್ರಕರಣದಲ್ಲಿ ದಾರಿ ತಪ್ಪಿಸಬೇಡಿ ಎಂದವರು ಬೆಂಗಳೂರು ಪೋಲೀಸರಿಗೆ ಸೂಚಿಸಿದ್ದಾರೆ.

Related posts