ವೋಟರ್ ಲಿಸ್ಟ್ ಕರ್ಮಕಾಂಡ; ತುಷಾರ್ ಗಿರಿನಾಥ್ ವರ್ಗಾವಣೆಗೆ ಕಾಂಗ್ರೆಸ್ ಬಿಗಿಪಟ್ಟು

ಬೆಂಗಳೂರು: ಮತದಾರರ ಪಟ್ಟಿ ಅಕ್ರಮ ವಿಚಾರದಲ್ಲಿ‌ ಕಾಂಗ್ರೆಸ್ ತನ್ನ ಹೋರಾಟವನ್ನು ಬಿರುಸುಗಿಳಿಸಿದೆ. ಈ ಭಾರೀ ಅಕ್ರಮ ವರ್ಷದ ಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಅವರೂ ಆರೋಪಿ ಎನ್ನುತ್ತಿರುವ ಕಾಂಗ್ರೆಸ್, ಅವರನ್ನು ಸೇವೆಯಿಂದ ಬಿಡುಗಡೆ ಕೋರಿ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದೆ.

ತುಷಾರ್ ಗಿರಿನಾಥ್ ಇವರ ವಿರುದ್ಧ ಸೆಕ್ಷನ್ 32 ಆರ್ ಪಿ ಆಕ್ಟ್ 1950 ಅನ್ವಯ 22-12-2022ರಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ದೂರು ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಅವರು ಪ್ರಜಾ ಪ್ರತಿನಿಧಿ ಕಾಯಿದೆ 1950 ಕಲಂ 32ರ ಅನ್ವಯ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಬೆಂಗಳೂರಿನಲ್ಲಿ ಬೂತ್ ಲೆವೆಲ್ ಅಧಿಕಾರಿಗಳ ನೇಮಕ, ಖಾಸಗಿಯವರಿಗೆ ಚುನಾವಣಾ ಕಾರ್ಯ ಹಂಚಿಕೆಯ ತಪ್ಪುಗಳನ್ನು ಎಸಗಿದ್ದಾರೆ ಎಂದು ಆ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಚಿಲುಮೆ ಖಾಸಗಿ ಸಂಸ್ಥೆಗೆ ಚುನಾವಣಾ ಕಾರ್ಯ ಹಂಚಿಕೆ ಮಾಡಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಕ್ಕೆ ಅವಕ್ಷ ನೀಡಿ ಗುರುತರವಾದ ಅಪರಾಧ ಎಸಗಲಾಗಿದೆ.. ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಇವರ ಸಂಪೂರ್ಣ ವೈಫಲ್ಯ ಕಂಡು ಬಂದಿರುತ್ತದೆ. ಇವರ ಮೇಲೆ ಕ್ರಮಕ್ಕೆ ಒತ್ತಾಯಿಸಿ 22-11-2022 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು ಬೆಳಕು ಚೆಲ್ಲಿದ್ದಾರೆ.

https://twitter.com/alvinviews/status/1646872049866928129?t=VkIP-D6TVb–xBXiZ8r8IA&s=19

ತುಷಾರ್ ಗಿರಿನಾಥ್ ಮೇಲೆ ಕ್ರಮ ಕೈಗೊಳ್ಳುವ ಬದಲು ಚುನಾವಣಾ ಆಯೋಗ ಇತರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿರುತ್ತದೆ. ಹಿರಿಯ ಐಎಎಸ್ ಅಧಿಕಾರಿಯಾದ ತುಷಾರ್ ಗಿರಿನಾಥ್ ಅವರು ತಮ್ಮ ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಚುನಾವಣಾ ಆಯೋಗದ ಕ್ರಮದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ರಮೇಶ್ ಬಾಬು, ಬಿಬಿಎಂಪಿ ಮುಖ್ಯ ಆಯುಕ್ತರ ಮೇಲೆ ಗುರುತರವಾದ ಆರೋಪಗಳು ಬಂದ ನಂತರವೂ ಕೇಂದ್ರ ಚುನಾವಣಾ ಆಯೋಗ ಇವರನ್ನು ಚುನವಣಾ ಕಾರ್ಯದಿಂದ ಬಿಡುಗಡೆ ಮಾಡದೇ ಇರುವುದು ಅನೇಕ ಅನುಮಾನಗಳಿಗೆ ಅವಕಾಶ ಕೊಟ್ಟಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಮೇಶ್ ಬಾಬು, ಮಾಜಿ ಶಾಸಕರು

ರಮೇಶ್ ಬಾಬು ದೂರಿನ ಹೈಲೈಟ್ಸ್ ಹೀಗಿದೆ

  • ತುಷಾರ್ ಗಿರಿನಾಥ್ ಅವರು ದೀರ್ಘಕಾಲದಿಂದ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದು, ಇವರ ವ್ಯಾಪ್ತಿಯ ಹಾಲಿ ಶಾಸಕರಿಗೆ ಮತ್ತು ಆಡಳಿತರೂಢ ಪಕ್ಷಕ್ಕೆ ನೇರವಾಗಿ ಸಹಾಯ ಮಾಡುತ್ತಿದ್ದಾರೆ.

  • ಮೊದಲ ಬಾರಿಗೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಪರಿಷ್ಕರಣೆ ಅನೇಕ ತಪ್ಪುಗಳ ಮತ್ತು ಅಕ್ರಮ ಸೇರ್ಪಡೆ, ತೆಗೆದುಹಾಕುವಿಕೆಗೆ ಕಾರಣವಾಗಿರುತ್ತದೆ.

  • ಬಿಬಿಎಂಪಿ ಮುಖ್ಯ ಆಯುಕ್ತರು ಚುನಾವಣಾ ಮತದಾರರ ಪಟ್ಟಿಯ ಪಾರದರ್ಶಕ ಪರಿಸ್ಕರಣೆಯ ಬದಲು ಕಾಮಗಾರಿಗಳ ವ್ಯವಹಾರಗಳಲ್ಲಿ ಆಸಕ್ತರಾಗಿ ಚುನಾವಣಾ ಕರ್ತವ್ಯಗಳನ್ನು ಕೈಚೆಲ್ಲಿರುತ್ತಾರೆ. 

  • ಈ ಅಕ್ರಮದಲ್ಲಿ ತುಷಾರ್ ಗಿರಿನಾಥ್ ಮೇಲೆ ಕ್ರಮ ಕೈಗೊಳ್ಳುವ ಬದಲು ಚುನಾವಣಾ ಆಯೋಗ ಇತರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿರುತ್ತದೆ.

  • ಹಿರಿಯ ಐಎಎಸ್ ಅಧಿಕಾರಿಯಾದ ತುಷಾರ್ ಗಿರಿನಾಥ್ ಅವರು ತಮ್ಮ ಅಧಿಕಾರದ ಪ್ರಭಾವವನ್ನು ಬಳಸಿಕೊಂಡು ಚುನಾವಣಾ ಆಯೋಗದ ಕ್ರಮದಿಂದ ತಪ್ಪಿಸಿಕೊಂಡಿದ್ದಾರೆ

  • ಚುನಾವಣಾ ಕಾರ್ಯದಿಂದ ಬಿಡುಗಡೆ ಮಾಡದೇ ಹೋದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪಾರದರ್ಶಕ ಚುನಾವಣೆ ಮಾಡಲು ಸಾಧ್ಯವಿರುವುದಿಲ್ಲ.

  • ಪಾರದರ್ಶಕ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯಗಳ ಸಂರಕ್ಷಣೆ ಕಾರಣಕ್ಕಾಗಿ ಚುನಾವಣಾ ಆಯೋಗ ನಡೆಸಬೇಕಾಗಿದೆ.

ಕಳಂಕಿತ ಅಧಿಕಾರಿಗಳನ್ನು ಚುನಾವಣಾ ಕಾರ್ಯದಿಂದ ವಿಮುಕ್ತ ಮಾಡದೇ ಹೋದರೆ ಮುಕ್ತವಾಗಿ ನಡೆಸಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶದಲೇಷಕರೂ ಆದ ರಮೇಶ್ ಬಾಬು ಅವರು ಕೇಂದ್ರ ಚುನಾವಣಾ ಆಯೋಗದ ಗಮನಸೆಳೆದಿದ್ದಾರೆ. ಕಳಂಕಿತ ಅಧಿಕಾರಿಯಾಗಿರುವ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಕೂಡಲೇ ಚುನಾವಣಾ ಕಾರ್ಯದಿಂದ ಬಿಡುಗಡೆ ಮಾಡಿ, ಪಾರದರ್ಶಕ ಚುನಾವಣೆಗಾಗಿ ಸಮರ್ಥ ಅಧಿಕಾರಿಯನ್ನು ನೇಮಿಸಬೇಕೆಂದು ರಮೇಶ್ ಬಾಬು ಆಗ್ರಗಹಿಸಿದ್ದಾರೆ.

Related posts