KSRTC ಸಾಧನೆಯ ಕಿರೀಟಕ್ಕೆ ಮತ್ತೊಂದು ರತ್ನ.. ಇದೀಗ ‘ಏಷ್ಯಾದ ಅತ್ಯುತ್ತಮ ಗುಣಮಟ್ಟ ಪುರಸ್ಕಾರ’

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ‘KSRTC’ ಪಾಲಿಗೆ ಮತ್ತಷ್ಟು ಪ್ರಶಸ್ತಿಗಳು ಹರಿದು ಸೇರುತ್ತಿವೆ. KSRTC ನಿಗಮದ ಉತ್ಕೃಷ್ಟ ಸೇವೆಗಾಗಿ ಮತ್ತೆ 4 ಪ್ರಶಸ್ತಿಗಳು ಸಿಕ್ಕಿವೆ.

‘ವೀ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್’ ಸ್ಥಾಪಿಸಿರುವ ASIA’s BEST QUALITY’  ಪ್ರಶಸ್ತಿಯು KSRTCಗೆ  ಲಭಿಸಿದೆ. ಬರೋಬ್ಬರಿ  ನಾಲ್ಕು ವರ್ಗದಲ್ಲಿ ಕೆಎಸ್ಸಾರ್ಟಿಸಿ ಪಾಲಿಗೆ ಪುರಸ್ಕಾರ ಸಿಕ್ಕಿರುವುದು ಗಮನಾರ್ಹ.

ನಾಲ್ಕು ವಿಭಾಗಗಳಲ್ಲಿ KSRTCಗೆ ಒಲಿದ ಪ್ರಶಸ್ತಿ:

  1. ಬ್ಯ್ರಾಡಿಂಗ್ ಮತ್ತು ಮಾರ್ಕೆಟಿಂಗ್,

  2. ಸಾರಿಗೆ ಸುರಕ್ಷತೆ,

  3. ಕಾರ್ಮಿಕ ಸ್ನೇಹಿ‌,

  4. ಉಪಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ

ಸೆಪ್ಟೆಂಬರ್ 29ರಂದು ದೆಹಲಿಯ ವಿಮಾನ ನಿಲ್ದಾಣ ಬಳಿಯ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.‌ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅತಾವಳೆ ಸಹಿತ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Related posts