ಪಟಾಕಿ ಬ್ಯಾನ್ ಹಿಂದೂ ಹಬ್ಬಗಳಲ್ಲಿ ಮಾತ್ರ ಯಾಕೆ? ಯತ್ನಾಳ್ ಪ್ರಶ್ನೆ

ಬೆಂಗಳೂರು:  ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೆಮಿಕಲ್ ಪಟಾಕಿಗಳನ್ನು ಹೊರತುಪಡಿಸಿ ಬೇರೆಯಾವುದೇ ಪಟಾಕಿಗಳನ್ನು ಹೊಡೆಯುವುದನ್ನು ನಿಲ್ಲಿಸಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರನ್ನು ಒತ್ತಾಯಿಸಿದ್ದಾರೆ.‌

ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತೇವೆ, ಜನವರಿ 1ಕ್ಕೆ, ರಾಜಕೀಯ ಕಾರ್ಯಕ್ರಮಗಳಿಗೆ ಇಲ್ಲದ ಪಟಾಕಿ ಬ್ಯಾನ್ ಈಗ ಹಿಂದೂ ಹಬ್ಬಗಳಲ್ಲಿ ಯಾಕೆ? ಎಂದವರು ಪ್ರಶ್ನಿಸಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಿಂದೂ ಹಬ್ಬಗಳಲ್ಲಿ ಮಾತ್ರ ಗಮನಹರಿಸುವುದಾ? ಎಂದು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿರುವ ಯತ್ನಾಳ್, ಪ್ರಜೆಗಳ ಪ್ರತಿನಿಧಿಯಾಗಿ ನಾನು ಹಿಂದುಗಳಿಗೆ ಹಬ್ಬ ಆಚರಣೆ ಮಾಡಲು ಯಾವುದೇ ತೊಂದರೆ ಕೊಡಬಾರದು, ಅನಾವಶ್ಯಕ ಕೇಸುಗಳನ್ನು ಹಾಕಬಾರದು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಪಣ ತೊಟ್ಟಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲಾ ಧಾರ್ಮಿಕ ಸ್ಥಳಗಳ ಮೇಲಿನ ಲೌಡ್ ಸ್ಪೀಕರ್ ತೆರವುಗೊಳಿಸಲಿ ಎಂದು ಸವಾಲಿ ಹಾಕಿರುವ ಶಾಸಕ ಯತ್ನಾಳ್, ದೀಪಾವಳಿಯ ಸಮಯದಲ್ಲಿ ಪಟಾಕಿ ನಿರ್ಬಂಧ ಹೇರುವ ಕರ್ನಾಟಕ ಮಾಲಿನಿ ನಿಯಂತ್ರಣ ಮಂಡಳಿ ಜನವರಿ 1ಕ್ಕೆ ಹಾಗು ಇತರೆ ಧಾರ್ಮಿಕ ಹಬ್ಬಗಳಲ್ಲಿ ಪತ್ತೆಯಿರುವುದಿಲ್ಲ ಎಂದು ಬೊಟ್ಟು ಮಾಡಿದ್ದಾರೆ.

Related posts