ತಿರುವನಂತಪುರಂ: ಈ ಅಜ್ಜಿಯ ವಯಸ್ಸಿಗೂ, ಇವರು ಪರೀಕ್ಷೆ ಬರೆಯುತ್ತಿರುವ ಸನ್ನಿವೇಶಕ್ಕೂ ತುಲನೆ ಮಾಡಬೇಡಿ. ಕಲಿಕೆಗೆ ಪ್ರಾಯ ಅಡ್ಡಿಯಾಗದು ಎಂಬುದಕ್ಕೆ ಈ ಅಜ್ಜಿ ಉದಾಹರಣೆಯಾಗಿದ್ದಾರೆ. ಶಾಲೆಗೇ ಹೋಗಲು ಮಕ್ಕಳು ಹಿಂದೇಟು ಹಾಕುವುದು ಸಹಜ. ಹೀಗಿರುವಾಗ ಕೇರಳದ ಕೊಲ್ಲಂನಲ್ಲಿ ಶತಾಯುಷಿ ಅಜ್ಜಿ ನಾಲ್ಕನೇ ತರಗತಿ ಪರೀಕ್ಷೆ ಬರೆದು ಜಗತ್ತಿನ ಗಮನ ಸೆಳೆದಿದ್ದಾರೆ.
ಇವರ ವಯಸ್ಸು ಭಾಗೀರಥಿ. ಇದೀಗ ಇವರ ವಯಸ್ಸು 105 ವರ್ಷಗಳು. ಕೇರಳ ಸರ್ಕಾರದ ಸಾಕ್ಷರತಾ ಮಿಷನ್ ನಡಿ ಆಯೋಜಿಸಲಾದ ಪರೀಕ್ಷೆಯಲ್ಲಿ ಈ ಅಜ್ಜಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಓದಲೇಬೇಕೆಂಬ ಹಂಬಲವಿದ್ದರೂ ಈವರೆಗೂ ಶಾಲೆಗೇ ಹೋಗಲಾಗಲಿಲ್ಲವಂತೆ. ಹಾಗಾಗಿ ತಾನೇ ಓದಿ ಕಲಿತು ಸಾಕ್ಷರತಾ ಮಿಷನ್ ಮೂಲಕ ಪರೀಕ್ಷೆ ಬರೆದಿದ್ದಾರೆ.
ಚಿಕ್ಕವಳಿದ್ದಾಗಲೇ ಶಾಲೆಗೇ ಹೋಗಬೇಕೆಂಬ ಆಸೆ ಇತ್ತಾದರೂ ಅದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಅನಂತರ ಕುಟುಂಬಕ್ಕೆ ಭಗೀರಥಿಯೇ ಆಧಾರವಾಗಿದ್ದರಿಂದ ಶಾಲೆಯತ್ತ ಮುಖ ಮಾಡದೆ ಕೆಲಸದತ್ತ ತೆರಳಬೇಕಿತ್ತಂತೆ. ಅಷ್ಟೇ ಅಲ್ಲ ಶಾಲೆಗೇ ಹೋಗಬೇಕಾದ ವಯಸ್ಸಲ್ಲೇ ಮದುವೆಯಾದರಂತೆ. ಹಾಗಾಗಿ ಶಿಕ್ಷಣ ಎಂಬುದು ಇವರಿಗೆ ಮರೀಚಿಕೆಯಾಗಿತ್ತು. ಆದರೆ ಇದೀಗ ೧೦೫ ರ ವಯಸ್ಸಲ್ಲಿ ಈ ಅಜ್ಜಿ ಭಗೀರಥ ಪ್ರಯತ್ನ ಮಡ್ಡಿದ್ದಾರೆ.