ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಅಮೆರಿಕಾ ಹೊಸ ತಂತ್ರ ಆರಂಭಿಸಿದೆ. ಸುಂಕ ಅಸ್ತ್ರ ಬಳಸಿದ ನಂತರ, ಈಗ ವೀಸಾ ವಿಚಾರದಲ್ಲೂ ಕಿರಿಕ್ ಮಾಡಲು ಮುಂದಾಗಿದೆ.
ಇರಾನ್‌ನ ಚಬಹಾರ್ ಬಂದರು ಯೋಜನೆಗೆ ನೀಡಿದ್ದ ‘ನಿರ್ಬಂಧ ವಿನಾಯಿತಿ’ ರದ್ದುಗೊಳಿಸುವ ಮೂಲಕ ಭಾರತಕ್ಕೆ ಅಡ್ಡಿಪಡಿಸಿರುವ ಅಮೆರಿಕಾ, ಇದೀಗ ಉದ್ಯೋಗ ವಲಸೆ ವೀಸಾಗಳನ್ನೇ ದುಬಾರಿಯಾಗಿಸುವ ಯೋಜನೆ ಹಾಕಿಕೊಂಡಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ 100,000 ಡಾಲರ್ ವೀಸಾ ಶುಲ್ಕ ವಿಧಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ತಜ್ಞ ವಿದೇಶಿ ಉದ್ಯೋಗಿಗಳಿಗೆ ಇದು ಭಾರೀ ಹೊರೆ ಎನಿಸಲಿದೆ.
ಕಾಂಗ್ರೆಸ್‌ನ ವ್ಯಾಪಕ ಟೀಕೆಯ ನಡುವೆಯೂ, ಅಮೆರಿಕಾ ಪೌರತ್ವದ ಮಾರ್ಗವಾಗಿ 1 ಮಿಲಿಯನ್ ಡಾಲರ್ ಮೌಲ್ಯದ “ಗೋಲ್ಡ್ ಕಾರ್ಡ್” ವೀಸಾ ಯೋಜನೆಯನ್ನೂ ಪ್ರಕಟಿಸಲಾಗಿದೆ. ಕಾನೂನಾಗಿ ಜಾರಿಯಾದರೆ, ಉದ್ಯೋಗ ವೀಸಾ ಬೆಲೆ ಗಗನಕ್ಕೇರುವುದಲ್ಲದೆ, ಭಾರತೀಯರ ಉದ್ಯೋಗದ ಕನಸುಗಳಿಗೆ ದೊಡ್ಡ ಅಡೆತಡೆ ಉಂಟಾಗಲಿದೆ.