ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ ವಿರುದ್ಧ ಕೊನೆಗೂ FIR ದಾಖಲು

ಮಂಗಳೂರು: ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ ಪರವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಮಾಡಿದರೂ ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕು ವೇಣೂರು ಪೊಲೀಸ್ ಠಾಣೆಯಲ್ಲಿ ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಎಫ್​ಐಆರ್​ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂದೇಶ್ ಅವರು​​​ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಇನ್ಸ್​ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.

ಸಂದೇಶ್ ವಿರುದ್ಧ ಕೆಲವು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಈ ಆರೋಪ ಸುಳ್ಳು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದರು. ಮುನ್ನವೇ, ಸಂತ್ರಸ್ತರ ಹೇಳಿಕೆ ದಾಖಲಿಸುವ ಮುನ್ನವೇ, ಪೊಲೀಸ್ ಆಯುಕ್ತರು ಇನ್ಸ್ಪೆಕ್ಟರ್’ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಸಾರ್ವಜನಿಕವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಈಗ ಸಂದೇಶ್​​ ವಿರುದ್ಧ ಜಿಲ್ಲಾ ಪೊಲೀಸರು ಅತ್ಯಾಚಾರ ದೂರು ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತೆ ಮಹಿಳೆ ಆರೋಪ ಸಂಬಂಧ ಕೆಲ ಆಡಿಯೋ ವಿಡಿಯೋಗಳ ಬಯಲಿಗೆ ಬರುತ್ತಿದ್ದಂತೆಯೇ ಮಹಿಳಾ ಆಯೋಗ ಸಹ ಸುಮಟೋ ಕೇಸ್ ದಾಖಲಿಸಿಕೊಂಡು, ಪ್ರಕರಣದ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಶಾಸಕ ಉಮಾನಾಥ್ ಕೋಟ್ಯಾನ್ ಗೃಹ ಸಚಿವರನ್ನ ಭೇಟಿ ಮಾಡಿ ಮಾಡಿ ಸೂಕ್ತ ತನಿಖೆಗೆ ಮನವಿ ಮಾಡಿದ್ದರು. ಅದೇ ಹೊತ್ತಿಗೆ ಇನ್ಸ್​ಪೆಕ್ಟರ್​ ಸಂದೇಶ ಅವರನ್ನು ಅಮಾನತು ಕೂಡ ಮಾಡಲಾಗಿತ್ತು.

Related posts