ಕೆಂಪುಕೋಟೆ ಗಲಭೆ; ದೆಹಲಿ ಪೊಲೀಸರಿಂದ ಸಾಲು ಸಾಲು ಎಫ್’ಐಆರ್

ದೆಹಲಿ: ಕೆಂಪು ಕೋಟೆಗೆ ಲಗ್ಗೆ ಹಾಕಿದ ಪ್ರಕರಣ ಹಾಗೂ ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿನ ಹಿಂಸಾಚಾರ ಸಂಬಂಧಿಸಿದಂತೆ ದೆಹಲಿ ಪೊಲೀಸರು 15ಕ್ಕೂ ಹೆಚ್ಚು ಎಫ್ ಐಆರ್ ಗಳನ್ನು ದಾಖಲಿಸಿಕೊಡಿದ್ದಾರೆ. ದೆಹಲಿ ಪೂರ್ವ ಜಿಲ್ಲೆಯಲ್ಲಿ ಮೂರು, ದ್ವಾರಕದಲ್ಲಿ ಮೂರು ಹಾಗೂ ಶಹದಾರ ಜಿಲ್ಲೆಯಲ್ಲಿ ಒಂದು ಎಫ್ ಐಆರ್, ಹೀಗೆ ಹಲವಡೆ ಎಫ್ ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರ ದೂರುಗಳನ್ನಾಧರಿಸಿ ಈ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಣರಾಜ್ಯ ದಿಂಡದಂದು ಸಾವಿರಾರು ರೈತರು ಬ್ಯಾರಿಕೇಡ್ ಮುರಿದು, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ವಾಹನಗಳನ್ನೂ ಹಾನಿಗೊಳಿಸಿ ದಾಂದಲೆ ನಡೆಸಿದ್ದಾರೆ. ಐತಿಹಾಸಿಕ ಕೆಂಪುಕೋಟೆಯಲ್ಲಿ ಧರ್ಮವೊಂದರ ಧ್ವಜವನ್ನು ಹಾರಿಸಿದ್ದಾರೆ. ಈ ಹಿಂಸಾಚಾರದಲ್ಲಿ 86 ಸಿಬ್ಬಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ ಐಟಿಒ ಬಳಿ ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಒಬ್ಬ ಸಾವನ್ನಪ್ಪಿದ್ದಾನೆ. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ…

ಕೆಂಪುಕೋಟೆ ದಾಂಧಲೆ ನಂತರ ರೈತರ ಹೋರಾಟದಿಂದ ‘ಕೈ’ ಯು-ಟರ್ನ್?

ದೆಹಲಿ : ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಿಂದ ಕಾಂಗ್ರೆಸ್ ಯು ಟರ್ನ್ ಹೊಡೆದಂತಿದೆ. ಗಣರಾಜ್ಯದಿನದಂದು ರೈತರ ಹೋರಾಟ ಸಂದರ್ಭದಲ್ಲಿ ನಡೆದ ಘಟನೆ ಕಾನೂನಿಗೆ ವಿರುದ್ಧವಾಗಿದೆ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೈ ನಾಯಕರೂ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿ, ನಾನು ಮೊದಲಿನಿಂದಲೂ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೆ. ಆದರೇ, ಇಂದು ಅವರು ಕಾನೂನು ಬಾಹೀರವಾಗಿ ನಡೆದುಕೊಂಡದ್ದನ್ನು ಕ್ಷಮಿಸುವುದಕ್ಕೆ ಸಾದ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಅವರು ರೈತರ ಹೋರಾಟದಿಂದ ಹಿಂದಕ್ಕೆ ಸರಿಯುವ ಪರೋಕ್ಷ ಸುಳಿವು ನೀಡಿದ್ದಾರೆ. Most unfortunate. I have supported the farmers’ protests from the start but I cannot condone lawlessness. And on #RepublicDay no flag but the sacred tiranga should fly…

ತೆರೆಯಲ್ಲಿ ಸಾಧ್ಯವೇ ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’; ಹೆಚ್ಚಿದ ಕುತೂಹಲ

ಆ್ಯಡಂ ವಿಂಗಾರ್ಡ್ ನಿರ್ದೇಶನದ ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಟ್ರೈಲರ್ ಬಿಡುಗಡೆಯಾಗಿದ್ದು, ಇದು ಈಗ ಭಾರೀ ಸದ್ದು ಆಗುತ್ತಿದೆ. ಜಗತ್ತಿನಾದ್ಯಂತ ‘ಗಾಡ್ಜಿಲ್ಲಾ ವರ್ಸಸ್ ಕಾಂಗ್’ ಭಾರೀ ಕುತೂಹಲ ಸೃಷ್ಟಿಸಿದ್ದು, ಇದರ ಟ್ರೈಲರ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಲೈಕ್ ಸಿಗುತ್ತಿದೆ.