‘ಕುಂದಾಪುರ’ ಚಿತ್ರದ ಟ್ರೈಲರ್ ಸಕತ್ ಸದ್ದು

ಊರುಗಳ ಹೆಸರಲ್ಲಿ ಸಿನಿಮಾ ಬರುತ್ತಿರುವುವು ಹೊಸದೇನಲ್ಲ. ಹಿಂದೆ ಶಿವಾಜಿ ಸುರತ್ಕಲ್, ಯಶ್ ಅಭಿನಯದ ಕೆಜಿಎಫ್, ಹೀಗೆ ಅನೇಕ ಸಿನಿಮಾಗಳು ಹಿಟ್ ಆಗಿವೆ. ಇದೀಗ ‘ಕುಂದಾಪುರ’ ಹೆಸರಲ್ಲೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಓಂ ಗುರು ಬಸ್ರೂರ್ ನಿರ್ದೇಶನದ ‘ಕುಂದಾಪುರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ರೈಲರ್’ಗೆ ಸಕತ್ ಮೆಚ್ಚುಗೆ ವ್ಯಕ್ತವಾಗಿದೆ.

ಕರಾವಳಿಗಾಗಿ ಪ್ರತ್ಯೇಕ ಮರಳು ನೀತಿ; ರಾಜ್ಯ ಸರ್ಕಾರದ ಚಿಂತನೆ

ಬೆಂಗಳೂರು: ಕರಾವಳಿ ಭಾಗಗಳಲ್ಲಿ ಮರಳು ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಕೂಲವಾಗಲು ಪ್ರತ್ಯೇಕ ಕರಾವಳಿ ಮರಳು ನೀತಿಯನ್ನು ಸರ್ಕಾರ ಪ್ರಕಟಿಸಲಿದೆ. ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಯು.ಟಿ.ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಮರಳು ನೀತಿಯನ್ನು ಪ್ರಕಟಿಸಲಿದ್ದೇವೆ. ಇದರಿಂದಾಗಿ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ನಾನು ಜಿಲ್ಲೆಗಳಿಗೆ ಭೇಟಿ ಕೊಟ್ಟಾಗ ನನಗೂ ಕೂಡ ಇದೇ ಸಮಸ್ಯೆ ಎದುರಾಗಿತ್ತು. ರಾಜ್ಯದ ಅನೇಕ ಕಡೆ ಮರಳಿನ ಅಲಭ್ಯತೆಯಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಇನ್ನು ಮುಂದೆ ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಸಮಸ್ಯೆ ಉಂಟಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಜಿಲ್ಲಾ ಮತ್ತು ರಾಜ್ಯಮಟ್ಟದ…

ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

ಬೆಂಗಳೂರು: ಜನವರಿ 31 ರಂದು ಪೋಲಿಯೊ ಲಸಿಕೆ ಹಾಕಿಸುವ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. ಜನವರಿ 17 ರಂದು ಪೋಲಿಯೋ ಲಸಿಕೆ ನೀಡಬೇಕಿತ್ತು. ಕೊರೊನಾ ಲಸಿಕೆ ಬಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೇ ತಿಂಗಳು 31 ರಂದು 0-5 ವರ್ಷದ 64,07,930 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಲಸಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಚಾಲನೆ ಸಿಗಲಿದೆ. ಪೋಷಕರು ಹಿಂದೆ ಲಸಿಕೆ ಹಾಕಿಸಿದ್ದರೂ ಮತ್ತೆ ಹಾಕಿಸಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಕಳೆದ 10-11 ವರ್ಷಗಳಿಂದ ಪೊಲೀಯೋ ಸೋಂಕು ಕಂಡುಬಂದಿಲ್ಲ. ಭಾರತದಲ್ಲಿ ಈ ರೋಗ ನಿಮೂರ್ಲನೆಯಾಗಿದೆ. ಆದರೆ ಪಕ್ಕದ ಪಾಕಿಸ್ತಾನ, ಅಫ್ಘನಿಸ್ತಾನದಲ್ಲಿ ಈ ರೋಗ ಇರುವುದರಿಂದ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕಿದೆ ಎಂದರು. ನಮ್ಮಲ್ಲಿ ಒಟ್ಟು…

ಸದ್ಯವೇ ‘ಇನ್‌ಸ್ಪೆಕ್ಟರ್ ವಿಕ್ರಂ’ ಬಿಡುಗಡೆ

ಪ್ರಜ್ವಲ್ ದೇವರಾಜ್ ನಟನೆಯ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರ ಸಧ್ಯವೇ ತೆರೆ ಕಾಣಲಿದೆ. ಬಹು ನಿರೀಕ್ಷೆಯ ‘ಇನ್‌ಸ್ಪೆಕ್ಟರ್ ವಿಕ್ರಂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಭಾವನ ಭಿನಯಿಸಿದ್ದು, ಇದನ್ನು ಶ್ರೀನರಸಿಂಹಯ್ಯ ನಿರ್ದೇಶಿಸಿದ್ದಾರೆ

9ನೇ ತರಗತಿ, ಪ್ರಥಮ ಪಿಯುಸಿ ಫೆಬ್ರವರಿ 1ರಿಂದ ಆರಂಭ

ಬೆಂಗಳೂರು: ಫೆಬ್ರವರಿ 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗುರುವಾರ ತಿಳಿಸಿದ್ದಾರೆ. ಕೊರೋನಾ ಸಂಕಟ ಕಾರಣದಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷ ತರಗತಿ ಇಲ್ಲದ ವರ್ಷವಾಗಿ ಪರಿಣಮಿಸಿದೆ. ಈ ನಡುವೆ ವರ್ಷ ಅಂತ್ಯದ ಸಂದರ್ಭದಲ್ಲಾದರೂ ತರಗತಿ ಆರಂಭದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಕೆಲವು ದಿನಗಳ ಹಿಂದಷ್ಟೇ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳು ಆರಂಭಗೊಂಡಿದ್ದವು. ಇದೀಗ ರಾಜ್ಯದಲ್ಲಿ ಫೆಬ್ರವರಿ 1ರಿಂದ 9ನೇ ತರಗತಿ, ಪ್ರಥಮ ಪಿಯುಸಿ ತರಗತಿಗಳನ್ನೂ ಆರಂಭ ಮಾಡಲು ತೀರ್ಮಾನಿಸಿದ್ದು, 9, 10, 11 ಮತ್ತು 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗುರುವಾರ ತಿಳಿಸಿದ್ದಾರೆ. 6 ರಿಂದ 8ನೇ…

ಗಣಿ ಕಾಯ್ದೆ ತಿದ್ದುಪಡಿಗೆ ಕ್ವಾರಿ ಮಾಲೀಕರ ಮನವಿ

ಬೆಂಗಳೂರು: 1944ರ ಕೆಎಂಎಂಸಿಆರ್ ಕಾಯ್ದೆಗೆ ಕೆಲವು ತಿದ್ದುಪಡಿ ಮಾಡಬೇಕೆಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ ಪ್ರತಿನಿಧಿಗಳು ಗಣಿ ಮತ್ತು ಭೂವಿಜ್ಞಾನ ಸಚಿವ ಮುರಗೇಶ್‍ನಿರಾಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸಚಿವರನ್ನು ಭೇಟಿ ಮಾಡಿದ ನಿಯೋಗ ಮನವಿ ಪತ್ರ ಸಲ್ಲಿಸಿತು. ಈ ವೇಳೆ ಸಂಘದ ಗೌರವಾಧ್ಯಕ್ಷ ದತ್ತಾತ್ರಿ.ಎಸ್, ಅಧ್ಯಕ್ಷ ಸಂಜೀವ ಹಟ್ಟಿಹೊಳಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.

ಬಲಾಡ್ಯರ ಒತ್ತುವರಿಗೆ ಮುಖ್ಯ ರಸ್ತೆ  ಬಲಿ; ಜೆಸಿಬಿಯಿಂದ ಆಗೆದು ಮಾರ್ಗಕ್ಕೆ ಹಾನಿ

ಬೆಂಗಳೂರು: ದೊಡ್ಡಬಳ್ಳಾಪುರ ಸಮೀಪದ ಗ್ರಾಮದ ಮಧ್ಯ ಭಾಗದಲ್ಲಿ ಹಾದು ಹೋಗಿರುವ  ರಸ್ತೆ  ಬಲಾಡ್ಯರಿಂದ ಒತ್ತುವರಿಯಾಗಿದ್ದು, ರಸ್ತೆಯನ್ನು ಜೆಸಿಬಿಯಿಂದ ಆಗೆದು ಹಾಳು ಮಾಡಲಾಗಿದೆ. ಇದರಿಂದ ಗ್ರಾಮದ ರಸ್ತೆ  ಬಂದ್ ಆಗಿದ್ದು  ವಾಹನಗಳ  ಓಡಾಟಕ್ಕೆ  ತೊಂದರೆಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಘಟ್ಟ ಗ್ರಾಮದಲ್ಲಿ ಹೊನ್ನಘಟ್ಟ  ಮತ್ತು ಕೊಳೂರು ಗ್ರಾಮಕ್ಕೆ  ಸಂಪರ್ಕಿಸುವ ರಸ್ತೆ  ಕಾಮಾಗಾರಿ ಶುರುವಾಗಿತ್ತು. ರಸ್ತೆಗೆ ಜಲ್ಲಿ ಹಾಸು  ಹಾಕಲಾಗಿದ್ದು ಕೆಲವೇ ದಿನಗಳಲ್ಲಿ ರಸ್ತೆ ಡಾಂಬರೀಕರಣ ಆಗಬೇಕಿತ್ತು, ಆದರೆ ಗ್ರಾಮದ ಬಲಾಡ್ಯರು ರಸ್ತೆಯ ಒಂದು ಬದಿಯನ್ನ ಒತ್ತುವರಿ ಮಾಡಿದ್ದಾರೆನ್ನಲಾಗಿದ್ದು, ಇದರಿಂದ ರಸ್ತೆಯು  ಮತ್ತೊಂದು ಬದಿಯ ಸಾಗುವಳಿ ಜಾಗವನ್ನು ಅಕ್ರಮಿಸಿಕೊಂಡಿದೆ. ಜಮೀನು ಕಳೆದುಕೊಳ್ಳುವ ಭಯದಲ್ಲಿರುವವರು ರಸ್ತೆಯಲ್ಲಿ ಕಲ್ಲಿನ ಕುಚಗಳನ್ನ ನಿರ್ಮಾಣ ಮಾಡಿ ತಮ್ಮ  ಜಾಗ ಗುರುತಿಸಿ ಕೊಂಡಿದ್ದಾರೆ, ಹೊನ್ನಘಟ್ಟ ಗ್ರಾಮದ ಸರ್ಕಾರಿ ಶಾಲೆಯಿಂದ ಕೊಳೂರು ರಸ್ತೆಯವರೆಗೂ ರಸ್ತೆ ಜಾಗವನ್ನು  ರಾಜಕೀಯ ಪ್ರಭಾವ ಬಳಸಿಕೊಂಡು ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕಡೇಯವರು ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಕಳೆದ 12 ವರ್ಷಗಳಿಂದ ಇದೇ ವಿಚಾರಕ್ಕೆ  ಎರಡು ಬದಿಯವರಿಗೂ ರಸ್ತೆ  ವಿಚಾರಕ್ಕೆ ಜಗಳವೂ ಆಗಿದೆ. ಸದ್ಯ ಹೊನ್ನಘಟ್ಟ…

ಫೆ.1ರಿಂದ ಹಲಿನ ಖರೀದಿ ದರ ಲೀಟರ್’ಗೆ 2 ರೂಪಾಯಿ ಹೆಚ್ಚಳ

ದೊಡ್ಡಬಳ್ಳಾಪುರ: ಕೇವಲ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ರೈತರಿಗೆ ನಷ್ಟವೇ ಹೊರೆತು ಲಾಭವಿಲ್ಲ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು. ತಾಲ್ಲೂಕಿನ ಮೆಣಸಿ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ನೆರವೇರಿಸಿದ ಅವರು, ದೇಶಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಕನಿಷ್ಠ ರೈತರ ಸಮಸ್ಯೆ ಕೇಳಲು ಕೂಡ ಪ್ರಧಾನಿ ನರೇಂದ್ರ ಮೋದಿಗೆ ಸೌಜನ್ಯವಿಲ್ಲ ಎಂದು ದೂರಿದರು. ಗೋಹತ್ಯೆ ನಿಷೇಧ ಕಾಯ್ದೆ ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ಸಮಾಜದಲ್ಲಿನ ಜನರನ್ನು ಒಡೆದು ಆಳುವ ನೀತಿ ಎದ್ದು ಕಾಣುತ್ತಿದೆ‌. ರೈತರ ಬಗ್ಗೆ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಪ್ರತಿ ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆಗಳನ್ನು ಸರ್ಕಾರ ತೆರೆಯಲಿ. ರೈತರಿಗೆ ಬೇಡವಾದ ಜಾನುವಾರುಗಳನ್ನು ಗೋಶಾಲೆಗೆ ಬಿಡುತ್ತಾರೆ. ರೈತರು ಬಿಡುವ ಜಾನುವಾರುಗಳಿಗೆ ಸರ್ಕಾರವೇ ಹಣ ನೀಡಲಿ. ಈ…

ದುರ್ಬಲರ ನೆರವಿಗೆ ತಂತ್ರ; ನಾರಾಯಣ ಗುರುಗಳ ಮಂತ್ರ; ರಾಜ್ಯದಲ್ಲೊಂದು ವಿಶೇಷ ಸೊಸೈಟಿ ಕಾರ್ಯಾರಂಭ

ಬೆಂಗಳೂರು: ಧಾರ್ಮಿಕ ಸಮಾನತೆಯ ಸಂತ ಶ್ರೀ ನಾರಾಯಣಗುರುಗಳ ಹೆಸರಲ್ಲಿ ಸಹಾಕಾರ ಸಂಘವೊಂದು ಅಸ್ತಿತ್ವಕ್ಕೆ ಬಂದಿದೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ದೇಶದ ಆಹಾರೋದ್ದಿಮೆ ಕ್ಷೇತ್ರದ ದಿಗ್ಗಜ ಗೋವಿಂದ ಬಾಬು ಪೂಜಾರಿ ಅವರ ಮುನಾದಾಳುತ್ವದಲ್ಲಿ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ರೂಪುಗೊಂಡಿದ್ದು ಈ ಹಣಕಾಸು ಸಂಸ್ಥೆ ಗುರುವಾರ ಉದ್ಘಾಟನೆಯಾಗಿದೆ. ಸಮಾನತೆಯ ಹರಿಕಾರ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ನಾರಾಯಣ ಗುರು ಅವರ ಸವಿಸ್ಮರಣೆ ಮೂಲಕ ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿ ಅಸ್ತಿತ್ವಕ್ಕೆ ಬಂದಿದ್ದು, ಉದ್ಯಮ ಅಪೇಕ್ಷಿತರಿಗೆ ಆರ್ಥಿಕ ಶಕ್ತಿ ತುಂಬುವ ಮಹಾದುದ್ದೇಶದಿಂದ, ದೇಶದ ಪ್ರತಿಷ್ಠಿತ ಆಹಾರೋದ್ಯಮ ಸಂಸ್ಥೆ ChefTalkನ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿಯವರು ಈ ನೂತನ ಸೊಸೈಟಿಯನ್ನು ಕಟ್ಟಿದ್ದಾರೆ. ಬೆಂಗಳೂರು ವಿಜಯನಗರದ ವೇಣುಗೋಪಾಲ್ ಆರ್ಕೆಡ್ (1ನೇ ಮುಖ್ಯರಸ್ತೆ,1ನೇ ಅಡ್ಡರಸ್ತೆ ಕ್ಲಬ್ ರೋಡ್) ನಲ್ಲಿರುವ ಸೊಸೈಟಿಯ ಆಡಳಿತ ಕಚೇರಿಯಲ್ಲಿ, ಕೇರಳ ಶಿವಗಿರಿಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಅರೇಮಲ್ಲಾಪುರ…

ವಿಧಾನಸಭೆಯ ಜಂಟಿ ಅಧಿವೇಶನ; ರಾಜ್ಯಪಾಲರ ಭಾಷಣವೇಳೆ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ

ಬೆಂಗಳೂರು: ಕಳೆದೆ ಒಂದೂವರೆ ವಷ೯ದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ. ಸರ್ಕಾರದ ಧೋರಣೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟಿಸಿದರು. ಉತ್ತರ ಕನಾ೯ಟಕ‌ ಭಾಗವಾದ ಹುಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ,‌ ಬೀದರ್, ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ ಎಂದು ಭಿತ್ತಿಪತ್ರ ಪ್ರದರ್ಶಿಸಿದರು. ಕನಾ೯ಟಕ ಸಕಾ೯ರ ಯಾವುದೇ ಅನುದಾನ ಪರಿಹಾರ ನೀಡಿಲ್ಲ. ಗಡಿವಿಚಾರದಲ್ಲಿ ಮಹಜನ ವರದಿಯೇ ಅಂತಿಮ ಹಾಗೂ ನಂಜುಂಡಪ್ಪ ವರದಿ ಸಂಪೂಣ೯ ಜಾರಿಗೆ ತರಬೇಕೆಂದು ಶಾಸಕರಾದ ಪ್ರಕಾಶ ಕೆ.ರಾಠೋಡ ಭಿತ್ತಿಪತ್ರ ಪ್ರದರ್ಶಿಸಿ ಅಸಮಾಧಾನ ಹೊರಹಾಕಿದರು.

Uncategorized