ಬೊಜ್ಜು- ಆರೋಗ್ಯದ ಮೇಲೆ ದುಷ್ಪಾರಿಣಾಮ ಅಷ್ಠಿಷ್ಟಲ್ಲ

ಆಧುನಿಕ ಜೀವನ ಶೈಲಿ, ಆಹಾರ ಪದ್ದತಿ, ಆರೋಗ್ಯದ ಮೇಲೆ ಬೀರುವ ದುಷ್ಪಾರಿಣಾಮ ಅಷ್ಠಿಷ್ಟಲ್ಲ. ಅದರಲ್ಲೂ ನಾವು ತಿನ್ನುವ ಜಂಕ್ ಪುಢ್ ಗಳಲ್ಲಿ ವಿಷದ ಅಂಶವೇ ಹೆಚ್ಚಾಗಿದ್ದು, ಇದು ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಬೊಚ್ಚಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ತೊಂದರೆ. ಮದುವೆಯಾದ ಮಹಿಳೆಯರಲ್ಲಂತೂ ಇದು ಕೊಂಚ ಹೆಚ್ಚೆಂದೆ ಹೇಳಬೇಕು. ಬೊಚ್ಚು ಆನೇಕಾನೇಕ ತೊಂದರೆಗಳನ್ನು ಉಂಟು ಮಾಡುತ್ತದೆ.ಸುಸ್ತಾಗುವಿಕೆ, ಮೈಕೈನೋವು, ಖಿನ್ನತೆ, ಬಂಜೆತನ, ಮಾನಸಿಕ ಒತ್ತಡ ಸೇರಿದಂತೆ ಹಲವು ರೀತಿಯ ತೊಂದರೆಗಳು ಬೊಚ್ಚಿನಿಂದ ಉಂಟಾಗುತ್ತದೆ.

ಬೊಚ್ಚಿನಿಂದಾಗುವ ತೊಂದರೆ

ದಪ್ಪಗಿರುವವರ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಇರುತ್ತದೆ. ಹೀಗಾಗಿ ರಕ್ತದೊತ್ತಡ ಜಾಸ್ತಿಯಾಗಿ ಹೃದಯಾಘಾತ ಉಂಟಾಗುವ ಸಾದ್ಯತೆ ಹೆಚ್ಚು.

  • ಬಂಜೆತನ ಸಮಸ್ಯೆ:  ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವ ಆಸೆ ಇದ್ದೇಇರುತ್ತೆ. ಆದರೆ ಬೊಚ್ಚಿನ ಸಮಸ್ಯೆಯಿಂದ ಹಾರ್ಮೋನುಗಳಲ್ಲಿ ವ್ಯತ್ಯಯವಾಗಿ ಅನಿಯಮಿತ ಮುಟ್ಟು ಕಾಣಿಸಿಕೊಂಡು ಇದು ಬಂಜೆತನಕ್ಕೆ ಕಾರಣವಾಗುತ್ತದೆ..
  • ಖಿನ್ನತೆ: ಹಾರ್ಮೋನುಗಳ ವ್ಯತ್ಯಯದಿಂದ ಮಾನಸಿಕ ಆರೋಗ್ಯವೂ ಹಾಳಾಗುತ್ತದೆ. ಹೀಗಾಗಿ ದಪ್ಪಗಿರುವ ಮಹಿಳೆಯರು ಖಿನ್ನತೆಯಂತಹ ರೋಗಕ್ಕೆ ಬೇಗನೆ ತುತ್ತಾಗುತ್ತಾರೆ..
  • ಒತ್ತಡ:  ದೇಹದಲ್ಲಿ ಅಡ್ರೆನಲಿನ್ ಎಂಬ ಹಾರ್ಮೋನ್ ಉತ್ಪತ್ತಿ ಜಾಸ್ತಿಯಾಗುತ್ತೋ ಆಗ ಒತ್ತಡ ಜಾಸ್ತಿಯಾಗುತ್ತದೆ. ಈ ಹಾರ್ಮೋನುಗಳ ಉತ್ಪತ್ತಿ ಜಾಸ್ತಿಯಾದರೆ ಹಸಿವು ಹೆಚ್ಚಾಗಿ, ಹೆಚ್ಚು ಹೆಚ್ಚು ಆಹಾರ ಸೇವಿಸಲು ಆರಂಭಿಸುತ್ತೇವೆ. ಇವುಗಳು ಇನ್ನಷ್ಟು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
  • ಮೈ-ಕೈನೋವು : ದೇಹದ ತೂಕ ಹೆಚ್ಚಾಗುವುದರಿಂದ, ಮೈ ಕೈ ನೋವು ಸಾಮಾನ್ಯವಾಗಿ ಕಾಡುತ್ತದೆ. ಮಾಂಸಖಂಡಗಳು ಉಬ್ಬುವುದರಿಂದ ಮೈಕೈನೋವಿನಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

Related posts