ರಾಜ್ಯದಲ್ಲಿ ಮತ್ತೆ 1843 ಕೊರೋನಾ ಕೇಸ್; ಬೆಂಗಳೂರಿನಲ್ಲಿ 981 ಮಂದಿಯಲ್ಲಿ ಸೋಂಕು

ಬೆಂಗಳೂರು: ಜಗತ್ತಿನಾದ್ಯಂತ ತಲ್ಲಣದ ತರಂಗ ಎಬ್ಬಿಸಿರುವ ಕೊರೋನಾ ವೈರಾಣು, ಇತ್ತ ಭಾರತವನ್ನೂ ಸಂದಿಗ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಅದರಲ್ಲೂ ಕರ್ನಾಟಕ ಕೂಡಾ ಆತಂಕದ ಸ್ಥಿತಿಯಲ್ಲಿದೆ.

ಕಳೆದ ಕೆಲವು ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗುತ್ತಿದ್ದು, ಇಂದು ಮತ್ತೆ 1843 ಪಾಸಿಟಿವ್ ಕೇಸ್’ಗಳು ವರದಿಯಾಗಿವೆ.

ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಇಂಥದ್ದೊಂದು ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 981 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 99, ಉತ್ತರಕನ್ನಡದ 81, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 68, ಧಾರವಾಡದಲ್ಲಿ 56, ಕಲಬುರಗಿ ಜಿಲ್ಲೆಯಲ್ಲಿ 53 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ಇದನ್ನೂ ಓದಿ.. ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ; ಭವ್ಯ ಸ್ವಾಗತ 

 

Related posts