ಹುಷಾರ್.. ವಯಸ್ಸಾದವರಷ್ಟೇ ಅಲ್ಲ ಯುವಜನರನ್ನೂ ಬಲಿಪಡೆಯುತ್ತೆ ಕೊರೋನಾ

ದೆಹಲಿ: ಕೋವಿಡ್ ವೈರಸ್‌ ಜಗತ್ತಿನಾದ್ಯಂತ ಮರಣ ಮೃದಂಗವನ್ನೇ ಭಾರಿಸುತ್ತಿದೆ. ಅದರಲ್ಲೂ ವೃದ್ದರು ಹಾಗೂ ಮಕ್ಕಳ ಪಾಲಿಗೆ ಈ ಅಗೋಚಾರ ವೈರಾಣು ಯಮಧೂತನಂತಿದೆ.

ಇದೀಗ ವೃದ್ದರು, ಮಕ್ಕಳಷ್ಟೇ ಅಲ್ಲ ಎಲ್ಲಾ ವರ್ಗದವರಿಗೂ ಕೊರೋನಾ ಮಾರಣಾಂತಿಕವಾಗಿ ಕಾಡುತ್ತಿದೆ ಎಂಬ ಸಂಗತಿ ಬಯಲಾಗಿದೆ. ದೇಶದಲ್ಲಿ ಕೊರೋನಾಗೆ ಬಲಿಯಾದವರ ಪೈಕಿ ನೂರಕ್ಕೂ ಹೆಚ್ಚು ಮಂದಿ ಯುವಜನರು ಎಂಬ ಸಂಗತಿಯನ್ನು ಸರ್ಕಾರವೇ ಬಹಿರಂಗಪಡಿಸಿದೆ.

60 ದಾಟಿರುವರಿಗೆ ಹಾಗೂ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚು ಅಪಾಯಕಾರಿ. ಚಿಕ್ಕ ಮಕ್ಕಳಲ್ಲೂ ಸೋಂಕನ್ನು ಸಹಿಸುವ ಸಾಮರ್ಥ್ಯ ಇರಲ್ಲ. ಆದರೆ ೩೦ ವರ್ಷದೊಳಗಿನ ಯುವಜನರಿಗೆ?

ಈ ವರೆಗೂ ಯುವಜನರಲ್ಲಿ ರೋಗಾಣು ದಾಳಿ ಎದುರಿಸುವ ಶಕ್ತಿ ಇದೆ ಎನ್ನಲಾಗುತ್ತಿದೆ. ಆದರೆ ಕೋವಿಡ್ ವೈರಸ್ ವಿಚಾರದಲ್ಲಿ ಇದು ಶೇಕಡಾ ನೂರರಷ್ಟು ಸತ್ಯವಲ್ಲ. ದೇಶದಲ್ಲಿ ಈವರೆಗೆ 30 ವರ್ಷದೊಳಗಿನ 103 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿರುವ ವಿಚಾರ ಎಲ್ಲಾ ತರ್ಕಗಳಿಗೆ ಉತ್ತರವಾಗಿ ನಮ್ಮ ಮುಂದಿದೆ.

ಭಾರತದಲ್ಲಿ 3,500ಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಮೃತರ ಪೈಕಿ ಸುಮಾರು 1,700 ಮಂದಿ 60 ವರ್ಷಕ್ಕಿಂತ ಕೆಳಗಿನವರು ಎಂಬುದು ಸರ್ಕಾರ ನೀಡಿರುವ ಮಾಹಿತಿ.

ಇದನ್ನೂ ಓದಿ.. ಲಾಕ್’ಡೌನ್ ಸಂದರ್ಭದಲ್ಲೂ ತಿಮ್ಮಪ್ಪನ ಮಹಿಮೆ 

 

Related posts