ಹಬ್ಬ ಎಂಬ ಕಾರಣಕ್ಕಾಗಿ ಕರ್ಫ್ಯೂ ಜಾರಿ? ; ಪ್ರಚೋದನಕಾರಿ ಸಂದೇಶಗಳ ಬಗ್ಗೆ ಮುಸ್ಲಿಂ ಪ್ರಜ್ಞಾವಂತರೇ ಗರಂ

ಬೆಂಗಳೂರು: ಭಾನುವಾರ ಮುಸ್ಲಿಮರ ಪವಿತ್ರ ಹಬ್ಬ.. ಆದರೆ ಲಾಕ್’ಡೌನ್ ಜಾರಿಯಲ್ಲಿರುವುದರಿಂದಾಗಿ ಸಂಭ್ರಮಾಚರಣೆ ಇಲ್ಲ. ಜೊತೆಗೆ ಭಾನುವಾರ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಬಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ‘ಭಾನುವಾರ ಮುಸ್ಲಿಮರ ಹಬ್ಬ ಎಂಬ ಕಾರಣಕ್ಕೆ ಕರ್ಪ್ಯೂ ಜಾರಿಗೊಳಿಸಿದೆ ‘ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ರೀತಿಯ ವರ್ತನೆ ಸರಿಯೇ ಎಂದು ಕನ್ನಡ-ತುಳು ಸಿನಿಮಾ ನಿರ್ದೇಶ ಇಸ್ಮಾಯಿಲ್ ಮೂಡುಶೆಡ್ಡೆ ಅವರು ತಮ್ಮದೇ ಸಮುದಾಯದವರನ್ನು ಪ್ರಶ್ನಿಸಿದ್ದಾರೆ.

‘ಲಾಠಿ ಚಾರ್ಜ್’ ಪತ್ರಿಕೆಯ ಸಂಪಾದಕರೂ ಆಗಿರುವ ಇಸ್ಮಾಯಿಲ್ ಮೂಡುಶೆಡ್ಡೆಯವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೇಖನವೊಂದನ್ನು ಪೋಸ್ಟ್ ಮಾಡಿದ್ದು, ಪ್ರಚೋದನಾಕಾರಿ ಸಂದೇಶದ ಮೂಲಕ ಸಮಾಜದ ಶಾಂತಿ ಕಾದಾಡುವವರು ವಿಘ್ನ ಸಂತೋಷಿಗಳು ಎಂದಿದ್ದಾರೆ. ಕೆಲವರು ಮುಸ್ಲಿಂ ಸಮಾಜಕ್ಕೆ ತಪ್ಪು ಸಂದೇಶ ತಲುಪಿಸುತ್ತಿದ್ದಾರೆ. ಇವರ ಪೈಕಿ ಹೆಚ್ಚಿನವರು ಕಾಂಗ್ರೆಸ್ಸಿಗರು ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.

ನೆನಪಿರಲಿ ಎಲ್ಲದಕ್ಕೂ ಸರ್ಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಈ ಭಾನುವಾರ ಮಾತ್ರವಲ್ಲ ಮುಂದೆ ಕೋರೋನ ಗಲಾಟೆ ನಿಲ್ಲುವವರೆಗೂ ಎಲ್ಲಾ ಭಾನುವಾರ ಕರ್ಫ್ಯೂ ಇದೆಯಂತೆ ..ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಭಾನುವಾರ ಹಬ್ಬ ಆಚರಿಸುತ್ತಿಲ್ಲ ಕೆಲವೊಂದು ಜಿಲ್ಲೆಯಲ್ಲಿ ಸೋಮವಾರ ಆಚರಿಸಲಾಗುತ್ತೆ ಎಂದು ಇಸ್ಮಾಯಿಲ್ ಹೇಳಿದ್ದಾರೆ.
ಅವರ ಸಂಪೂರ್ಣ ಬರಹ ಇಲ್ಲಿದೆ ನೋಡಿ.

ಲಾಠಿ ಚಾರ್ಜ್……………..‘ಭಾನುವಾರ ಮುಸ್ಲಿಮರ ಹಬ್ಬ ಎಂಬ ಕಾರಣಕ್ಕೆ ಕರ್ಪ್ಯೂ ಜಾರಿಗೊಳಿಸಲಾಗಿದೆ ‘ ಎಂಬ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಘ್ನ ಸಂತೋಷಿಗಳು ಹರಿಯಬಿಟ್ಟಿದ್ದಾರೆ ,ಈ ಮೂಲಕ.…..

 

Related posts