ಉಡುಪಿ: ನಾಡು ಕೊರೋನಾ ಹಾವಳಿಯಿಂದ ನಲುಗಿದ್ದು, ಸೋಂಕು ಹರಡದಂತೆ ತಡೆಯಲು ಲಾಕ್’ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ಜನ ಅಸಹಾಯಕರಾಗಿದ್ದಾರೆ. ಅಂಥವರ ನೆರವಿಗೆ ಧಾವಿಸಿದೆ ಕೊಲ್ಲೂರು ದೇವಾಲಯ.
ಕೊರೊನಾದಿಂದಾಗಿ ಸಮಸ್ತ ಜನತೆ ಬವಣೆ ಎದುರಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರವೂ ಮಾನವೀಯ ನೆಲೆಯಲ್ಲಿ ಎಲ್ಲ ವರ್ಗದ ಬವಣೆ ನೀಗಿಸುವಲ್ಲಿ ಅತ್ಯಂತ ತ್ವರಿತವಾಗಿ ಸ್ಪಂದಿಸುತ್ತಿರುವುದು ಅಭಿನಂದನೀಯ. ಕರಾವಳಿಯ ಗಂಡುಕಲೆ ಯಕ್ಷಗಾನದ ಹತ್ತಾರು ಮೇಳಗಳಲ್ಲಿ ನೂರಾರು ಕಲಾವಿದರು,ಕಾರ್ಮಿಕರು ಕಲಾ ಕೈಂಕರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲೂ ಅನೇಕ ಕುಯ್ಟುಂಬಗಳು ಅಸಹಾಯಕವಾಗಿವೆ.
ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲೆಸಿರುವ ಪ್ರಸ್ತುತ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಈ ಕಲಾವಿದರಿಗೆ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾನವೀಯ ನೆಲೆಯಲ್ಲಿ ಸ್ಪಂದಿಸಿದ್ದಾರೆ. ಕೊಲ್ಲೂರು ದೇವಳದಿಂದ ಮೂಕಾಂಬಿಕೆಯ ಪ್ರಸಾದ ರೂಪದಲ್ಲಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನು 1800 ಕಲಾ ಕುಟುಂಬಗಳಿಗೆ ಒದಗಿಸುವ ಮೂಲಕ ಕಲಾ ಕುಟುಂಬಗಳಿಗೆ ಆಸರೆ ನೀಡಿ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ . ಕೊಲ್ಲೂರು ದೇವಳದ ವಠಾರದಲ್ಲಿ ಈ ಕಿಟ್ ಗಳ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಸಚಿವ ಶ್ರೀನಿವಾಸ ಪೂಜಾರಿಯವರು ಈ ಕಿಟ್ ಗಳ ವಿತರಣೆಯ ಜವಾಬ್ದಾರಿ ಹೊತ್ತಿರುವ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಇದನ್ನೂ ಓದಿ.. ಪರೀಕ್ಷೆಗೆ ಮುಹೂರ್ತ ಫಿಕ್ಸ್; ಜು.1ರಿಂದ 15ರೊಳಗೆ 10 ಮತ್ತು 12ನೇ ತರಗತಿ ಎಕ್ಸಾಂ
ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಯಕ್ಷಗಾನ ಮೇಳಗಳ ಮುಖ್ಯಸ್ಥರಾದ ಪಿ.ಕಿಶನ್ ಹೆಗ್ಡೆ, ಕಲಾರಂಗದ ಪದಾಧಿಕಾರಿಗಳಾದ ಎಸ್ ವಿ ಭಟ್, ಗಂಗಾಧರ ರಾವ್ ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ರಾಜೇಶ್ ನಾವಡ, ಹೆಚ್ ಎನ್ ವೆಂಕಟೇಶ್,ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು .
ಇದೇ ವೇಳೆ, ಕಲಾವಿದರಿಗೆ ನೆರವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಸಚಿವರಿಗೆ ದೇವಳದ ಆಡಳಿತ ಮಂಡಳಿಗೆ ಕಲಾರಂಗದ ಪದಾಧಿಕಾರಿಗಳು ಕೃತಜ್ಞತೆ ಅರ್ಪಿಸಿದರು. ಪ್ರತೀ ದಿನ ಸಾವಿರಾರು ಜನರಿಗೆ ಅಣ್ಣ ದಾಸೋಹ ನಡೆಸುತ್ತಿರುವ ದೇವಾಲಯ ಇದೀಗ ಸಾಂಸ್ಕೃತಿಕ ರಂಗದ ಮಂದಿಗೂ ನೆರವಿನ ಹಸ್ತ ಚಾಚಿದೆ. ಈ ಬಗ್ಗೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಮೆಚ್ಚುಗೆ ವ್ಯಕ್ಯಪಡಿಸಿದ್ದಾರೆ.
ಇದನ್ನೂ ಓದಿ.. ಮಡ್ಯಂಗಡಿಗಳು ಮತ್ತೆ ಬಂದ್? ಕಿಕ್’ನಲ್ಲಿರುವ ಎಣ್ಣೆಪ್ರಿಯರಿಗೆ ಶಾಕ್